Select Your Language

Notifications

webdunia
webdunia
webdunia
webdunia

ಪಾಕ್ ಪ್ರಧಾನಿ ವಿರುದ್ಧ ಗುಡುಗಿದ ಸಲೀಮ್ ಖಾನ್

Writer Salim Khan
ಮುಂಬೈ , ಬುಧವಾರ, 21 ಸೆಪ್ಟಂಬರ್ 2016 (17:51 IST)
ಉರಿ ಸೇನಾ ನೆಲೆಯ ಮೇಲೆ ಉಗ್ರ ದಾಳಿಯನ್ನು ಖಂಡಿಸಿರುವ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಂದೆ, ಬರಹಗಾರ ಸಲೀಮ್ ಖಾನ್ ಪಾಕ್ ಪ್ರಧಾನಿ ವಿರುದ್ಧ ಹರಿಹಾಯ್ದಿದ್ದಾರೆ. 

ಕ್ಷಮೆ ಕೇಳಿ ಷರೀಫ್, ನಿಮಗೆ ನವಾಜ್ ಷರೀಫ್ ಎಂದು ಹೆಸರಿಟ್ಟವರಿಗೆ ಈ ಮೊದಲೇ ನಿಮ್ಮ ಗುಣಗಳ ಬಗ್ಗೆ ತಿಳಿದಿದ್ದರೆ ನಿಮಗೆ ಬೇ-ನವಾಜ್ ಶರೀರ್ ಎಂದು ಹೆಸರಿಡುತ್ತಿದ್ದರು, ಎಂದು ಶೋಲೆ ಸಿನಿಮಾ ಖ್ಯಾತಿಯ ಖಾನ್ ಸರಣಿ ಟ್ವೀಟ್ ಮಾಡಿದ್ದಾರೆ. 
 
ನೀವು ಪ್ರಮಾದ್ ಎಸಗಿದ್ದೀರಿ. ಸೈನ್ಯ, ಸಂಸತ್ತು, ಜನರು ಸೇರಿದಂತೆ ಯಾರು ಕೂಡ ನನ್ನ ಮಾತನ್ನು ಕೇಳಲ್ಲ ಎಂಬುದನ್ನು ನೀವೇ ಒಪ್ಪಿಕೊಂಡಿರುತ್ತೀರಿ. ನಿಮ್ಮ ಕುಟುಂಬ ನಿಮ್ಮ ಮಾತನ್ನು ಕೇಳುತ್ತದೆ ಎಂದರೆ ಅದು ಆಶ್ಚರ್ಯಕರ ವಿಷಯವೇ ಸರಿ. ಹೀಗಿದ್ದಾಗಲೂ ಜಗತ್ತೆಲ್ಲ ಸುತ್ತಾಡುತ್ತ ಭಾರತದ ವಿರುದ್ಧ ದೂರಿದರೆ ಕೇಳುವವರು ಯಾರು? ಎಂದು ಖಾನ್ ಪ್ರಶ್ನಿಸಿದ್ದಾರೆ. 
 
ಶಾರುಖ್ ಖಾನ್, ರಣದೀಪ್ ಹೂಡಾ, ರಿತೇಶ್ ದೇಶ್‌ಮುಖ್, ಮಧುರ್ ಭಂಡಾರ್ಕರ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಉರಿ ದಾಳಿಯನ್ನು ಖಂಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಜಿಹಾ ಖಾನ್ ಆತ್ಮಹತ್ಯೆಯಲ್ಲ, ಹತ್ಯೆ: ಪ್ರಕರಣಕ್ಕೆ ಹೊಸ ಟ್ವಿಸ್ಟ್