Select Your Language

Notifications

webdunia
webdunia
webdunia
webdunia

ಜಿಹಾ ಖಾನ್ ಆತ್ಮಹತ್ಯೆಯಲ್ಲ, ಹತ್ಯೆ: ಪ್ರಕರಣಕ್ಕೆ ಹೊಸ ಟ್ವಿಸ್ಟ್

ಜಿಹಾ ಖಾನ್ ಆತ್ಮಹತ್ಯೆಯಲ್ಲ, ಹತ್ಯೆ: ಪ್ರಕರಣಕ್ಕೆ ಹೊಸ ಟ್ವಿಸ್ಟ್
ಮುಂಬೈ: , ಮಂಗಳವಾರ, 20 ಸೆಪ್ಟಂಬರ್ 2016 (15:00 IST)
ಬಾಲಿವುಡ್ ನಟಿ ಜಿಹಾ ಖಾನ್ ಪ್ರಕರಣ ಸರಳವಾದುದಲ್ಲ. ಇದೊಂದು ಹತ್ಯೆಯಾಗಿದೆ ಎಂದು ಬ್ರಿಟನ್ ಫಾರೆನ್ಸಿಕ್ ತಜ್ಞರು ವರದಿಯಲ್ಲಿ ಉಲ್ಲೇಖಿಸಿದ್ದರಿಂದ ಮೂರು ವರ್ಷದ ಹಿಂದಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದೆ.
 
ಜಿಹಾ ಖಾನ್ ಮುಖ ಮತ್ತು ಕುತ್ತಿಗೆಯ ಭಾಗದಲ್ಲಿರುವ ಕಲೆಯ ಗುರುತುಗಳು ಹಾಗೂ ಆಕೆ ನೇಣು ಹಾಕಿಕೊಂಡ ರೀತಿ ಪ್ರತಿಯೊಂದು ಸಂಶಯದಾಸ್ಪಕವಾಗಿದೆ ಎಂದು ವರದಿಯಲ್ಲಿ ಬಹಿರಂಗಪಡಿಸಿದೆ. 
 
ಜಿಹಾ ತಾಯಿ ರಾಬಿಯಾ ಬ್ರಿಟನ್ ಫಾರೆನ್ಸಿಕ್ ತಜ್ಞರ ವರದಿಯನ್ನು ನಾಳೆ ಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆ ಸಂದರ್ಭದಲ್ಲಿ ದಾಖಲೆಗಳನ್ನು ಕೋರ್ಟ್‌ಗೆ ಮಂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಇದೊಂದು ಹತ್ಯೆ ಪ್ರಕರಣವಲ್ಲ ಆತ್ಮಹತ್ಯೆ ಪ್ರಕರಣ ಎಂದು ಸಿಬಿಐ ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದ ಒಂದು ತಿಂಗಳ ನಂತರ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದೆ.
 
ಆದಿತ್ಯ ಪಾಂಚೋಲಿ ಪುತ್ರ ಸೂರಜ್ ಪಾಂಚೋಲಿಯೊಂದಿಗೆ ಡೇಟಿಂಗ್ ನಡೆಸುತ್ತಿದ್ದ ಜಿಹಾ. 2013ರ ಜೂನ್ 3 ರಂದು ಜುಹು ಅಪಾರ್ಟ್‌ಮೆಂಟ್‌ನಲ್ಲಿ ನೇಣಿಗೆ ಶರಣಾಗಿದ್ದರು. 
 
ಪುತ್ರಿ ಜಿಹಾ ಖಾನ್ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರ ತಾಯಿ ರಾಬಿಯಾ, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಾಗರಹಾವು ಸಿನಿಮಾ ಟ್ರೈಲರ್ ( ವಿಡಿಯೋ)