Publish Date: Fri, 12 Jan 2018 (07:14 IST)
Updated Date: Fri, 12 Jan 2018 (07:17 IST)
ಮುಂಬೈ : ಇತ್ತೀಚೆಗೆ ಕೋರ್ಟ್ ಆವರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ರಾಜಸ್ಥಾನದ ಗ್ಯಾಂಗ್ ಸ್ಟಾರ್ ಲಾರೆನ್ಸ್ ಅವರು ಜೀವ ಬೆದರಿಕೆ ಹಾಕಿದ್ದರು. ಈ ಹಿನ್ನಲೆಯಲ್ಲಿ ಶೂಟಿಂಗ್ ವೇಳೆ ಅನುಮಾಸ್ಪದ ವ್ಯಕ್ತಿಗಳು ತಿರುಗಾಡುತ್ತಿರುವುದನ್ನು ನೋಡಿ ಸಲ್ಮಾನ್ ಖಾನ್ ಅವರು ಶೂಟಿಂಗ್ ನಿಲ್ಲಿಸಿ ಮನೆಗೆ ತೆರಳಿದ್ದಾರೆ.
ಸಲ್ಮಾನ್ ಖಾನ್ ಅವರು ‘ರೇಸ್ 3’ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿದ್ದು, ಆ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಅನುಮಾಸ್ಪದ ರೀತಿಯಲ್ಲಿ ಅಡ್ಡಾಡುತ್ತಿರುವುದನ್ನು ಕಂಡು ಚಿತ್ರತಂಡ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಲ್ಮಾನ್ ಖಾನ್ ಹಾಗು ಚಿತ್ರದ ನಿರ್ಮಾಪಕ ರಮೇಶ್ ತೌರಾನಿ ಅವರನ್ನು ಪೊಲೀಸ್ ಪಡೆಯ ವಾಹನದಲ್ಲಿ ಮನೆಗೆ ತಲುಪಿಸಿದರು. ಇನ್ನು ಮುಂದೆ ಸಲ್ಮಾನ್ ಖಾನ್ ಅವರಿಗೆ ಶೂಟಿಂಗ್ ಸಮಯದಲ್ಲಿ ಹೆಚ್ಚಿನ ಭದ್ರತೆ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ