Publish Date: Fri, 09 Mar 2018 (06:42 IST)
Updated Date: Fri, 09 Mar 2018 (06:45 IST)
ಮುಂಬೈ : ಬಾಲಿವುಡ್ ನಟಿ ರವೀನಾ ಟಂಡನ್ ಅವರು ದೇವಸ್ಥಾನದ ಆವರಣದಲ್ಲಿ ಜಾಹೀರಾತೊಂದನ್ನು ಚಿತ್ರಿಕರಿಸಿದ್ದಕ್ಕಾಗಿ ಅವರ ವಿರುದ್ದ ಎಫ್.ಐ.ಆರ್. ದಾಖಲಿಸಲಾಗಿದೆ.
ಹೆಚ್ಚಾಗಿ ಕೆಲವು ದೇವಸ್ಥಾನಗಳಲ್ಲಿ ದೇವಾಲಯದ ಆವರಣದಲ್ಲಿ ಭಕ್ತರು ಮೊಬೈಲ್ ಫೋನ್ ಬಳಸುವಂತಿಲ್ಲ. ಫೋಟೋ ಹಾಗೂ ವಿಡಿಯೋಗಳನ್ನು ತೆಗೆಯಬಾರದು ಎಂದು ದೇವಾಲಯದ ಆಡಳಿತ ಮಂಡಳಿ ನಿಯಮಗಳನ್ನು ವಿಧಿಸಿರುತ್ತಾರೆ. ಆದರೆ ನಟಿ ರವೀನಾ ಟಂಡನ್ ಅವರು ಭುವನೇಶ್ವರದ ಶ್ರೀ ಲಿಂಗರಾಜ್ ದೇವಸ್ಥಾನದಲ್ಲಿ ಈ ನಿಯಮಗಳನ್ನು ಮೀರಿ ಬ್ಯೂಟಿ ಟಿಪ್ಸ್ ಕುರಿತು ಜಾಹೀರಾತೊಂದನ್ನು ಶೂಟ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು ದೇವಾಲಯದ ಆಡಳಿತ ಮಂಡಳಿ ಅವರು ನಟಿಯ ವಿರುದ್ಧ ದೂರು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ