Webdunia - Bharat's app for daily news and videos

Install App

ನಟಿ ತನುಶ್ರೀ ದತ್ತ ಮೈ ಕೈ ಎಲ್ಲಾ ಮುಟ್ಟಿ ಹಿಂಸಿಸಿದ ಆ ನಟ ಯಾರು ಗೊತ್ತಾ?

Webdunia
ಗುರುವಾರ, 27 ಸೆಪ್ಟಂಬರ್ 2018 (09:02 IST)
ಮುಂಬೈ : ‘ಆಶಿಕ್ ಬನಾಯ’ ಚಿತ್ರದಲ್ಲಿ ನಟಿಸಿದ ನಟಿ ತನುಶ್ರೀ ದತ್ತ ಇದೀಗ ಸಿನಿಮಾರಂಗದಲ್ಲಿ ತಮಗಾದ ಕೆಟ್ಟ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಖ್ಯಾತ ನಟರೊಬ್ಬರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.


ಬಾಲಿವುಡ್ ನಟ ಇಮ್ರಾನ್ ಹಶ್ಮಿ ಜೊತೆಗೆ ‘ಆಶಿಕ್ ಬನಾಯ’ ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ ತನುಶ್ರೀ ದತ್ತ ಬಾಲಿವಡ್ ನ ಕೆಲವೇ ಕೆಲವು ಸಿನಿಮಾದಲ್ಲಿ ನಟಿಸಿ ಚಿತ್ರರಂಗದಿಂದಲೇ ಕಣ್ಮರೆಯಾಗಿದ್ದರು. ಆದರೆ ಇದೀಗ ಅವರು  ಖಾಸಗಿ ಮಾಧ್ಯಮ ಸಂಸ್ಥೆಯೊಂದಿಗೆ ನೀಡಿದ ಸಂದರ್ಶನದಲ್ಲಿ ಕರಾಳ ಅನುಭವ ತೆರೆದಿಟ್ಟಿದ್ದಾರೆ.


ಹಾಲಿವುಡ್ ನಲ್ಲಿ ಕಳೆದ ಎರಡು ವರ್ಷದ ಹಿಂದೆ ಕೆಟ್ಟ ಅನುಭವವಾದರೆ ಭಾರತದಲ್ಲಿ ಹಲವು ಸಾರಿ ಆಗಿದೆ. 2008ರಲ್ಲಿಯೇ ನಾನು ಸಮಸ್ಯೆ ಎದುರಿಸಿದೆ. ಮಾಧ್ಯಮಗಳು ಸಹ ಇಂಥದರ ವಿರುದ್ಧ ಸರಿಯಾಗಿ ಧ್ವನಿ ಎತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


2008ರಲ್ಲಿ ಹಾರ್ನ್ ಒಕೆ ಪ್ಲೀಸ್ ಎಂಬ ಹಾಡಿನ ಚಿತ್ರೀಕಕರಣ ನಡೆಯುತ್ತಿತ್ತು. ಈ ವೇಳೆ ಬಾಲಿವುಡ್ ನ ಖ್ಯಾತ ನಟ ನಾನಾ ಪಾಟೇಕರ್​ ನನ್ನನ್ನು ಬಿಗಿಯಾಗಿ ತಬ್ಬಿಕೊಳ್ಳಲು ಯತ್ನ ಮಾಡಿದರು. ನಿನಗೆ ನೃತ್ಯ ಮಾಡುವುದನ್ನು ಹೇಳಿಕೊಡುತ್ತೇನೆ ಎಂದು ಬೇಕಾದಲ್ಲಿ ಮೈ ಕೈ ಎಲ್ಲ ಮುಟ್ಟಿ ಹಿಂಸಿಸಿದರು. ಈ ವಿಷಯದ ಬಗ್ಗೆ ನಾನು ನಿರ್ದೇಶಕ ಮತ್ತು ನಿರ್ಮಾಪಕರ ಬಳಿ ಹೇಳಿಕೊಂಡಾಗ ಅವರೂ ನಾನಾ ಪಾಟೇಕರ್​​ ಅವರ ಬೇಡಿಕೆಗಳಿಗೆ ಒಪ್ಪಿಕೊಳ್ಳಿ ಅಂತಾ ನನಗೆ ಮಾನಸಿಕ ಹಿಂಸೆ ನೀಡಿದ್ದಾರೆ  ಎಂದು ನಟಿ ನೋವು ತೋಡಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್‌ ಫ್ಯಾನ್ಸ್‌ಗಳಿಗೆ ಡಬಲ್‌ ಗುಡ್‌ನ್ಯೂಸ್‌: ಮಹತ್ವದ ಸಂದೇಶ ಹಂಚಿಕೊಂಡ ವಿಜಯಲಕ್ಷ್ಮಿ

ಬಿಕಿನಿ ತೊಟ್ಟು ಪಡ್ಡೆ ಹೈಕಳ ಹಾರ್ಟ್‌ ಬೀಟ್ ಹೆಚ್ಚಿಸಿದ ಸೋನು ಗೌಡ

ಮತ್ತೇ ಒಂದಾಗುವ ನಿರ್ಧಾರ ಕೈಗೊಂಡ ಬಾಲಿವುಡ್‌ನ ಸ್ಟಾರ್ ಜೋಡಿ, ವಕೀಲರು ಹೇಳಿದ್ದೇನು

ಬೀದಿಗೆ ಬಂತು ಯಶ್ ತಾಯಿ, ದೀಪಿಕಾ ದಾಸ್ ಜಗಳ: ಆ ಯೋಗ್ಯತೆ ನಿಮಗಿಲ್ಲ ಎಂದ ದೀಪಿಕಾ

ನಟ ಸುದೀಪ್ ಖರೀದಿಸಿದ ಜಾಗದಲ್ಲಿ ವಿಷ್ಣು ಅಭಿಮಾನ ಸ್ಮಾರಕ ನಿರ್ಮಾಣಕ್ಕೆ ಚಾಲನೆ

ಮುಂದಿನ ಸುದ್ದಿ