ರಣಬೀರ್ ರಣಬೀರ್ ಕಪೂರ್ ಮಾಜಿ ಗರ್ಲ್ಫ್ರೆಂಡ್ ಕತ್ರೀನಾ ಕೈಫ್ ಜತೆಗೆ ಫುಟ್ಬಾಲ್ ಆಡುವ ಮೂಲಕ ಗಮನ ಸೆಳೆದಿದ್ದಾರೆ. ನಿನ್ನೆ ಕತ್ರೀನಾ ತಮ್ಮ ಬರ್ತಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದಾರೆ. ಆದ್ರೆ ಲಂಡನ್ಗೆ ತೆರಳುವ ಮುನ್ನ ಕತ್ರೀನಾ ರಣಬೀರ್ ಜತೆಗೆ ಫುಟ್ಬಾಲ್ ಆಡಿದ್ದಾರಂತೆ.
ಮೂಲಗಳ ಪ್ರಕಾರ ರಣಬೀರ್ ಬ್ಯೂಸಿ ಇದ್ರು ಮಾಜಿ ಗೆಳತಿ ಜತೆಗೆ ಫುಟ್ಬಾಲ್ ಆಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ರಣಬೀರ್ ಹಾಗೂ ಕತ್ರೀನಾ ಕೈಫ್ ಅಭಿನಯಿಸಿರುವ 'ಜಗ್ಗಾ ಜಾಸೂಸ್' ತೆರೆಗೆ ಬರಲಿದೆ. ಬ್ರೇಕ್ ಅಪ್ ಬಳಿಕವು ಕತ್ರೀನಾ ಹಾಗೂ ರಣಬೀರ್ ಹಲವು ಬಾರಿ ವೃತ್ತಿಪರತೆ ತೋರಿದ್ದರು.
ತಮ್ಮಿಬ್ಬರು ಮಧ್ಯೆ ಇರುವಂತಹ ಮುನಿಸನ್ನು ಮರೆತು ಹಲವು ಬಾರಿ 'ಜಗ್ಗಾ ಜಾಸೂಸ್' ಚಿತ್ರದ ಪ್ರಚಾರದಲ್ಲಿ ಭಾಗಿಯಾಗುವ ಮೂಲಕ ಗಮನ ಸೆಳೆದಿದ್ದ ಈ ಜೋಡಿ, ಇದೀಗ ಮತ್ತೆ ಇಬ್ಬರು ಫುಟ್ಬಾಲ್ ಆಡುವುದರ ಮೂಲಕ ಗಮನ ಸೆಳೆದಿರುವುದು ಅಚ್ಚರಿ ಮೂಡಿಸಿದೆ.ಮತ್ತೆ ರಣಬೀರ್ ಹಾಗೂ ಕತ್ರೀನಾ ಒಂದಾಗುತ್ತಾರಾ? ಎಂಬುದು ಅಭಿಮಾನಿಗಳ ಪ್ರಶ್ನೆ.
ಜಗ್ಗ ಜಾಸೂಸ್' ಸಿನಿಮಾ ಈಗಾಗಲೇ ಬಾಲಿವುಡ್ ನಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿ ಹಾಕಿದೆ. ಪರಸ್ಪರ ದೂರವಾದ ಬಳಿಕ ಕ್ಯಾಟ್ ಹಾಗೂ ರಣ್ ಬೀರ್ ಕಪೂರ್ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿರುವ ಸಿನಿಮಾವಾಗಿರೋದ್ರಿಂದ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ