ಹಿರಿಯ ನಟ ರಾಜೇಶ್ ಖನ್ನಾ ನಾಲ್ಕನೇ ವರ್ಷದ ಪುಣ್ಯಸ್ಮರಣೆಯ ನಿಮಿತ್ಯ ಪುತ್ರಿ ಟ್ವಿಂಕಲ್ ಖನ್ನಾ ನೆನಪಿಸಿಕೊಂಡಿದ್ದಾರೆ. ಮುಂಬೈನ ಆಶೀರ್ವಾದ್ ಬಂಗಲೆಯಲ್ಲಿ ಹಿರಿಯ ನಟ ರಾಜೇಶ್ ಖನ್ನಾ ಸಾವನ್ನಪ್ಪಿದ್ದರು. ಭಾರತದ ಮೊದಲ ಸೂಪರ್ ಸ್ಟಾರ್ ಎಂಬ ಖ್ಯಾತಿ ಪಡೆದಿದ್ದ ರಾಜೇಶ್ ಖನ್ನಾ, ಕ್ಯಾನ್ಸರ್‌ನಿಂದ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು.
ತಮ್ಮದೇ ಆದ ಡೈಲಾಗ್‌ಗಳಿಂದ ಮನೆ ಮಾತಾಗಿದ್ದ ರಾಜೇಶ್ ಖನ್ನಾ ಆನಂದ ಮರೇ ನಹಿ..ಆನಂದ ಮರ್ತೇ ನಹಿ ಎಂದು ಫೇಮಸ್ ಡೈಲಾಗ್ ಹೇಳುತ್ತಿದ್ದರು.
ಸ್ಕ್ರೀನ್ ಮೇಲೆ ತಮ್ಮದೇ ಆದ ಅಮೋಘ ಅಭಿನಯದಿಂದ ಮೋಡಿ ಮಾಡುತ್ತಿದ್ದ ರಾಜೇಶ್ ಖನ್ನಾ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಭಾರತದ ಮೊದಲ ಸೂಪರ್ ಸ್ಟಾರ್ 2012ರಲ್ಲಿ ಸಾವನ್ನಪ್ಪಿದ್ದರು.
ಹಲವು ನಟಿಯರ ಜತೆಗೆ ರೋಮ್ಯಾನ್ಸ್ ಪಾತ್ರಗಳಲ್ಲಿ ಮಿಂಚಿದ್ದ ಅವರು, ಹಲವು ನಿರ್ದೇಶಕರ ಜತೆಗೆ ಕೆಲಸ ಮಾಡಿದ್ದರು. ಹೃಶಿಕೇಶ್ ಮುಖರ್ಜಿ, ಶಕ್ತಿ, ಯಶ್ ಛೋಪ್ರಾ, ಮನ್ ಮೋಹನ್ ದೇಸಾಯಿ ಖ್ಯಾತ ನಿರ್ದೇಶಕರ ಜತೆಗೆ ಕೆಲಸ ಮಾಡಿದ್ದರು.
ಇತ್ತೀಚೆಗೆ ಟ್ವಿಂಕಲ್ ಖನ್ನಾ ಸಿನಿಮಾ ಕಥೆ ಬಗ್ಗೆ ಮಾತನಾಡಿದ್ದರು. ನನ್ನ ತಲೆಯಲ್ಲಿ ಸಿನಿಮಾವೊಂದಕ್ಕೆ ಕಥೆಯಿದೆ. ಆದ್ರೆ ತಲೆಯಲ್ಲಿರುವ ಸಿನಿಮಾದ ಕಥೆಯನ್ನು ಅಕ್ಷರ ರೂಪಕ್ಕೆ ಇಳಿಸುತ್ತೇನೋ ಇಲ್ವೋ ನನಗೆ ಗೊತ್ತಿಲ್ಲ, ಆದ್ರೆ ನಾನು ಕಥೆ ಬರೆಯುತ್ತೇನೆ ಅಂತಾ ಟ್ವಿಂಕಲ್ ಖನ್ನಾ ಹೇಳಿದ್ದರು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ