ಒಬ್ಬ ನಟನಿಗೆ ಸದಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಅಂತ ಹಂಬಲ ವಿರುತ್ತದೆ. ಅಂಥ ನಟರಲ್ಲಿ ಮನೋಜ್ ಬಾಜ್ಪೇಯಿ ಕೂಡ ಒಬ್ಬರು. ವಿಭಿನ್ನ ಪಾತ್ರಗಳಲ್ಲಿ ಮಿಂಚಬೇಕು, ಯಾವುದೇ ಪಾತ್ರದಲ್ಲಿ ನಟಿಸಿದ್ರು ಕಂಫರ್ಟ್ ಆಗಿರಬೇಕು ಎಂಬುದು ಮನೋಜ್ ಅಭಿಪ್ರಾಯ. ಆದ್ದರಿಂದ ಮನೋಜ್ ಆಫರ್ ಬಂದ್ರು ಒಪ್ಪಿಕೊಳ್ಳುತ್ತಿಲ್ಲ. ಅಲ್ಲದೇ ಉತ್ತಮ ಪಾತ್ರಗಳನ್ನೇ ಅವರು ರಿಜೆಕ್ಟ್ ಮಾಡಿದ್ದಾರಂತೆ.
ಆ್ಯಕ್ಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮನೋಜ್ ಬಾಜ್ಪೇಯಿ ಆ್ಯಕ್ಟಿಂಗ್ ಅಂದ್ರೆ ಅವರಿಗೆ ತುಂಬಾ ಇಷ್ಟವಂತೆ. ಕಷ್ಟಕರವಾಗಿರುವಂತಹ ಪಾತ್ರಗಳಲ್ಲಿ ನಟಿಸಬೇಕು ಎಂಬುದು ನನ್ನ ಆಸೆ.
ಈ ಕಾರಣಕ್ಕಾಗಿ ನಾನು ಸರಳವಾಗಿರುವಂತಹ ಪಾತ್ರಗಳನ್ನು ರಿಜೆಕ್ಟ್ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಇನ್ನೂ ಮನೋಜ್ ಬಾಜ್ಪೇಯಿ ನ್ಯಾಷನಲ್ ಅವಾರ್ಡ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಷ್ಟಕರವಾಗಿರುವಂತಹ ಪಾತ್ರಗಳನ್ನೇ ಚಾಲೆಂಜ್ ಆಗಿ ಸ್ವೀಕರಿಸುವ ಮನೋಭಾವ ಮನೋಜ್ ಅವರದ್ದು, ಇಂಥ ಪಾತ್ರಗಳನ್ನೇ ಅವರು ಎಂಜಾಯ್ ಮಾಡುತ್ತಾರಂತೆ. ಒಬ್ಬ ನಟನಿಗೆ ವಿಭಿನ್ನ ಪಾತ್ರಗಳನ್ನು ಮಾಡಬೇಕಾದರೆ ನಾಚಿಕೆ ಇರಬಾರದು. ಪ್ರತಿಯೊಂದು ಪಾತ್ರವನ್ನು ಪ್ರಯೋಗ ಮಾಡಬೇಕು ಅಂಥ ಚಿತ್ರಗಳಲ್ಲಿ ನಟಿಸಬೇಕು ಎಂದು ಮನೋಜ್ ಬಾಜ್ಪೇಯಿ ಅಭಿಪ್ರಾಯ ಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ