ನಿನ್ನೆ ನಟಿ ಕ್ರತೀನಾ ಕೈಫ್ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ದಿನದಂದು ಅವರು ಫೇಸ್‌ಬುಕ್‌ಗೆ ಎಂಟ್ರಿ ನೀಡಿದ್ದರು. ಫೇಸ್‌ಬುಕ್‌ಲ್ಲಿ ಕತ್ರೀನಾ ಕೈಫ್‌ಗೆ 4 ಮಿಲಿಯನ್ ಜನರು ಫಾಲೋವರ್ಸ್ ಆಗಿದ್ದಾರೆ. ಫೇಸ್‌ಬುಕ್‌ಗೆ ಎಂಟ್ರಿ ನೀಡಿರುವುದರ ಬಗ್ಗೆ ಕತ್ರೀನಾ ವಿಡಿಯೋ ಕೂಡ ಅಪ್ ಲೋಡ್ ಮಾಡಿದ್ದರು.
ವಿಡಿಯೋದಲ್ಲಿ ಫೇಸ್ ಬುಕ್ ಬಗ್ಗೆ ಹೇಳಿಕೊಂಡಿದ್ದರು. ಅಲ್ಲದೇ ತಮ್ಮ ಅಭಿಮಾನಿಗಳ ಜತೆಗೆ ಕ್ಯಾಟ್ ಚಾಟ್ ಕೂಡ ಮಾಡಿರುವುದು ತಿಳಿದು ಬಂದಿದೆ. ಈ ವೇಳೆ ಅಭಿಮಾನಿಗಳಿಂದ ಪ್ರೀತಿ ಪಡೆದುಕೊಂಡಿರುವ ಕತ್ರೀನಾ, ಮೊದಲ ದಿನದಲ್ಲೇ 4 ಮಿಲಿಯನ್ ಫಾಲೋವರ್ಸ್ ಪಡೆದುಕೊಂಡಿದ್ದಾಳೆ ಕತ್ರೀನಾ.
ಮೊದಲ ಬಾರಿಗೆ ಸೋಷಿಯಲ್ ನೆಟ್‌ವರ್ಕಿಂಗ್ ಬಳಕೆ ಮಾಡದ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದ ನಟಿ ಕ್ಯಾಟ್ ಫೇಸ್‌ಬುಕ್‌ಗೆ ಎಂಟ್ರಿ ನೀಡುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಕ್ಯಾಟ್ ಮುಂಬರುವ ಚಿತ್ರ 'ಬಾರ್ ಬಾರ್ ದೇಖೋ' ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಿದ್ದಾಳೆ. ಇನ್ನೂ ಆಕೆ ಸೋಷಿಯಲ್ ಮೀಡಿಯಾದಲ್ಲಿ ಆಕೆ ಎಂಟ್ರಿ ನೀಡಿರುವುದಕ್ಕೆ ಕಾರಣ ಅಂದ್ರೆ ಖಾಸಗಿ ಆಗಿ ಹಾಗೂ ವೃತ್ತಿಗಾಗಿ ಎಂಟ್ರಿ ನೀಡಿದ್ದಾರೆ. ಅಭಿಮಾನಿಗಳ ಜತೆಗೆ ನೇರವಾಗಿ ಸಂಪರ್ಕದಲ್ಲಿರಲು ಕ್ಯಾಟ್ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ