Select Your Language

Notifications

webdunia
webdunia
webdunia
webdunia

ನಟಿ ಹನ್ಸಿಕಾ ಮೋಟ್ವಾನಿ ಬಿಕಿನಿ ಭಂಗಿ

ನಟಿ ಹನ್ಸಿಕಾ ಮೋಟ್ವಾನಿ ಬಿಕಿನಿ ಭಂಗಿ
Mumbai , ಶನಿವಾರ, 7 ಜನವರಿ 2017 (08:58 IST)
ಕನ್ನಡದ ’ಬಿಂದಾಸ್’ ಚಿತ್ರದಲ್ಲಿ ಅಭಿನಯಿಸಿದ್ದ ಹನ್ಸಿಕಾ ಮೋಟ್ವಾನಿ ದಕ್ಷಿಣ ಭಾರತದಲ್ಲಿ ತನ್ನದೇ ಛಾಪು ಮೂಡಿಸಿದ ಬೆಡಗಿ. ಕನ್ನಡಕ್ಕಿಂತಲೂ ಹೆಚ್ಚಾಗಿ ಟಾಲಿವುಡ್ ಮತ್ತು ಕೋಲಿವುಡ್‌ನಲ್ಲಿ ಮಿಂಚಿದ ಬೆಡಗಿ. ಬಾಲ ಕಲಾವಿದೆಯಾಗಿ ಬೆಳ್ಳಿಪರದೆಗೆ ಅಡಿಯಿಟ್ಟ ಹನ್ಸಿಕಾ ನಾಯಕಿಯಾಗಿ ಬೆಳೆದವರು.
 
ದಕ್ಷಿಣದಲ್ಲಿ ಸಾಕಷ್ಟು ಹಿಟ್ ಚಿತ್ರಗಳಲ್ಲಿ ಅಭಿನಯಿಸಿರುವ ಹನ್ಸಿಕಾ ಇದೇ ಮೊದಲ ಬಾರಿಗೆ ಬಿಕಿನಿ ತೊಟ್ಟು ಎಲ್ಲರ ಗಮನಸೆಳೆದಿದ್ದಾರೆ. ಬಿಕಿನಿ ತೊಟ್ಟು ಅದಕ್ಕೊಂದು ಅಡಿಬರಹವನ್ನೂ ಕೊಟ್ಟಿದ್ದಾರೆ ಹನ್ಸಿಕಾ. ’ವಾಟರ್ ಬೇಬೀಸ್’ ಎಂದು  ಕ್ಯಾಪ್ಷನ್ ಕೊಟ್ಟು ಎಲ್ಲರ ಗಮನಸೆಳೆದಿದ್ದಾರೆ.
 
ಬಿಕಿನಿ ತೊಟ್ಟು ಈಜುಕೊಳಕ್ಕೆ ಇಳಿದಿರುವ ಭಂಗಿಯಲ್ಲಿ ಅವರು ಫೋಟೋವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ತೆಲುಗಿನ ಒಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೋಹನ್ ಬಾಬು ಪುತ್ರ ಮಂಜು ಮನೋಜ್ ಜೊತೆಗೆ ’ಲಕ್ಕುನ್ನೋಡು’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಿರುತೆರೆ ನಟಿ ಶಮಾ ಹಾಟ್ ಬಾಡಿ ಪ್ರದರ್ಶನ