Select Your Language

Notifications

webdunia
webdunia
webdunia
webdunia

ಕ್ಯಾಮೆರಾ ಕಣ್ಣಿಗೆ ಮತ್ತೆ ಸಿಕ್ಕಿಬಿದ್ದ ಜೋಡಿ ಹಕ್ಕಿಗಳು

ಕ್ಯಾಮೆರಾ ಕಣ್ಣಿಗೆ ಮತ್ತೆ ಸಿಕ್ಕಿಬಿದ್ದ ಜೋಡಿ ಹಕ್ಕಿಗಳು
Mumbai , ಬುಧವಾರ, 4 ಜನವರಿ 2017 (14:16 IST)
ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತೆ ಸುದ್ದಿಯಾಗಿದ್ದಾರೆ. ಕ್ರಿಸ್ಮಸ್ ಸಂಭ್ರಮವನ್ನು ಜೊತೆಯಾಗಿ ಆಚರಿಸಿಕೊಂಡ ಈ ಜೋಡಿ ಹೊಸ ವರ್ಷವನ್ನೂ ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದು ಗೊತ್ತೇ ಇದೆ. 
 
ಡೆಹ್ರಾಡೂನ್‍ನ ವಿಮಾನದಲ್ಲಿ ಇವರಿಬ್ಬರೂ ಇರಬೇಕಾದರೆ ಕ್ಲಿಕ್ಕಿಸಿದ ಫೋಟೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಂಭ್ರಮ ಮುಗಿಸಿಕೊಂಡು ತಮ್ಮ ತಮ್ಮ ಮನೆಗೆ ಹೊರಡಬೇಕಾದರೆ ತೆಗೆದಿರುವ ಫೋಟೋ ತಹ ಇದೆ.  
 
ತಮ್ಮ ಪ್ರೇಯಸಿ ಅನುಷ್ಕಾ ಭುಜದ ಮೇಲೆ ಕೊಹ್ಲಿ ಕೈಹಾಕಿರುವುದನ್ನು ಕಾಣಬಹುದು. ಇನ್ನೊಂದು ಕಡೆ ಇಂಗ್ಲೆಂಡ್ ಜೊತೆಗೆ  ಟೀಂ ಇಂಡಿಯಾ ಟೆಸ್ಟ್ ಮಿಗಿದ ಮೇಲೆ ಕೊಹ್ಲಿ ತನ್ನ ಪ್ರೇಯಸಿಕೊಂದಿಗೆ ಒಂದು ವಾರ ಡೆಹ್ರಾಡೂನ್ ಪ್ರವಾಸಕ್ಕೆ ಹೊರಟಿದ್ದರು. ಹೊಸ ವರ್ಷಕ್ಕೆ ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಅನುಷ್ಕಾ ಶೂಟಿಂಗ್‍ನಿಂದ ಸ್ವಲ್ಪ ವಿರಾಮ ಪಡೆದಿದ್ದರು.   
 
ಇನ್ನೇನು ನಿಶ್ಚಿತಾರ್ಥ ಆಗಿಯೇ ಹೋಯಿತು ಎಂಬ ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ಕೊಹ್ಲಿ ಪ್ರತಿಕ್ರಿಯಿ ಅಂತಹ ಅರ್ಜೆಂಟ್ ಏನೂ ಇಲ್ಲ ಎಂದಿದ್ದರು. ಒಟ್ನಲ್ಲಿ ಮದುವೆಗೆ ಮುಂಚೆ ಈ ಜೋಡಿ ಸಾಕಷ್ಟು ಸುತ್ತಾಡುತ್ತಿದೆ. ಕ್ಯಾಮೆರಾ ಕಣ್ಣುಗಳು ಇವರನ್ನು ಹಿಂಬಾಲಿಸುತ್ತಿವೆ ಅಷ್ಟೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನಿ ಬೆಡಗಿ ಜತೆಗೆ ಶಾರುಖ್ ಖಾನ್ ಪ್ರೇಮ