Select Your Language

Notifications

webdunia
webdunia
webdunia
webdunia

ಪಾಕಿಸ್ತಾನಿ ಬೆಡಗಿ ಜತೆಗೆ ಶಾರುಖ್ ಖಾನ್ ಪ್ರೇಮ

ಪಾಕಿಸ್ತಾನಿ ಬೆಡಗಿ ಜತೆಗೆ ಶಾರುಖ್ ಖಾನ್ ಪ್ರೇಮ
Mumbai , ಬುಧವಾರ, 4 ಜನವರಿ 2017 (13:12 IST)
ಶಾರುಖ್ ಖಾನ್ ಅಭಿನಯದ ರಾಯಿಸ್ ಚಿತ್ರದ ಬಗ್ಗೆ ಬಾಲಿವುಡ್‍ನಲ್ಲಿ ಭಾರಿ ನಿರೀಕ್ಷೆಗಳಿವೆ. ಇದೇ ಜನವರಿ 25ಕ್ಕೆ ಚಿತ್ರ ತೆರೆಕಾಣುತ್ತಿದೆ. ರಾಯಿಸ್‍ನಲ್ಲಿ ಶಾರುಖ್ ಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವುದು ಪ್ರಮುಖ ಆಕರ್ಷಣೆ ಎನ್ನಬಹುದು. 
 
ಇನ್ನೊಂದು ವಿಶೇಷ ಎಂದರೆ ಶಾರುಖ್ ಜತೆ ಪಾಕಿಸ್ತಾನಿ ಬೆಡಗಿ ಮಹಿರಾ ಖಾನ್ ತೆರೆ ಹಂಚಿಕೊಂಡಿದ್ದಾರೆ. ಆಕೆ ಜತೆಗಿನ ಫೋಟೋ ಇತ್ತೀಚೆಗೆ ಬಿಡುಗಡೆ ಮಾಡಿದರು ಶಾರುಖ್. ಚಿತ್ರದಲ್ಲಿ ಕೇವಲ ಮದ್ದುಗುಂಡುಗಳ ಸದ್ದಷ್ಟೇ ಅಲ್ಲ, ರೊಮ್ಯಾನ್ಸ್‌ಗೂ ಜಾಗ ಇದೆ ಎಂಬುದನ್ನು ಈ ಪೋಸ್ಟರ್ ಖಚಿತಪಡಿಸಿದೆ.
 
ಚಿತ್ರದಲ್ಲಿ ಪಾಕಿಸ್ತಾನಿ ನಟಿ ಅಭಿನಯಿಸಿರುವುದು ಈಗ ಚರ್ಚೆಯ ವಿಷಯವಾಗಿದೆ. ’ಉರಿ’ ಉಗ್ರದಾಳಿ ಬಳಿಕ ಭಾರತ-ಪಾಕಿಸ್ತಾನ ಸಂಬಂಧಗಳು ಇನ್ನಷ್ಟು ಹಳಸಿವೆ. ಈ ಹಿನ್ನೆಲೆಯಲ್ಲಿ ಪಾಕ್ ಕಲಾವಿದರನ್ನು ಬಾಲಿವುಡ್ ಸಿನಿಮಾಗಳಲ್ಲಿ ಬಳಸಿಕೊಳ್ಳಬಾರದು ಎಂದು ಮಹಾರಾಷ್ಟ್ರ ನವನಿರ್ಮಾಣ ವೇದಿಕೆ ಪ್ರತಿಭಟಿಸಿದ್ದು ಗೊತ್ತೇ ಇದೆ. 
 
ಏ ದಿಲ್ ಹೈ ಮುಷ್ಕಿಲ್ ಚಿತ್ರಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಈಗ ರಾಯಿಸ್ ಚಿತ್ರದಲ್ಲಿ ಪಾಕ್ ಬೆಡಗಿ ಅಭಿನಯಿಸಿರುವುದು ವಿವಾದಕ್ಕೆ ಕಾರಣವಾಗುವ ಸಾಧ್ಯತೆಗಳಿವೆ. ಆದರೆ ಈಗಾಗಲೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಅಧ್ಯಕ್ಷ ರಾಜ್ ಠಾಕೂರ್ ಅವರನ್ನು ಶಾರುಖ್ ಭೇಟಿ ಮಾಡಿ ಚಿತ್ರ ಬಿಡುಗಡೆಗೆ ಮುಂದಾಗಿದ್ದಾರೆ ಎಂಬ ಸುದ್ದಿ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತ್ರಿಷಾ ಕೃಷ್ಣನ್ ಮಹಿಳಾ ಪ್ರಧಾನ ’1818’ ಸಿನಿಮಾ