Select Your Language

Notifications

webdunia
webdunia
webdunia
webdunia

ತ್ರಿಷಾ ಕೃಷ್ಣನ್ ಮಹಿಳಾ ಪ್ರಧಾನ ’1818’ ಸಿನಿಮಾ

ತ್ರಿಷಾ ಕೃಷ್ಣನ್ ಮಹಿಳಾ ಪ್ರಧಾನ ’1818’ ಸಿನಿಮಾ
Hyderabad , ಬುಧವಾರ, 4 ಜನವರಿ 2017 (13:05 IST)
ಕೋಲಿವುಡ್‍ನಲ್ಲಿ ಈಗ ಹೊಸ ಟ್ರೆಂಡ್ ಶುರುವಾಗಿದೆ. ನಾಯಕಿ ಪ್ರಧಾನ ಚಿತ್ರಗಳಿಗೆ ಹೀರೋಯಿನ್‌ಗಳು ಆಸಕ್ತಿ ತೋರುತ್ತಿದ್ದು ಅವರಲ್ಲಿ ಪ್ರಮುಖವಾಗಿ ನಯನತಾರಾ ಇದ್ದಾರೆ. ಇದೀಗ ಅವರ ಹಾದಿಯಲ್ಲೇ ಹೆಜ್ಜೆ ಹಾಕಲು ಹೊರಟಿದ್ದಾರೆ ತ್ರಿಷಾ ಕೃಷ್ಣನ್.
 
ಮೈಂಡ್ ಡ್ರಾಮಾ ಎಂಬ ನಿರ್ಮಾಣ ಸಂಸ್ಥೆ ’1818’ ಎಂಬ ಶೀರ್ಷಿಕೆಯಲ್ಲಿ ಸಿನಿಮಾ ಆರಂಭಿಸಿದೆ. ಈ ಚಿತ್ರಕ್ಕೆ ಓಂ ಪ್ರಕಾಶ್ ಆಕ್ಷನ್ ಕಟ್ ಹೇಳುತ್ತಿದ್ದು, ತೆಲುಗು, ತಮಿಳು ಭಾಷೆಗಳಲ್ಲಿ ಮೂಡಿಬರಲಿದೆ. ತಮನ್ ಸಂಗೀತ ಚಿತ್ರಕ್ಕಿದೆ. ಈ ಸಿನಿಮಾದಲ್ಲಿ ತೆಲುಗಿನ ಖ್ಯಾತ ಪೋಷಕರೆಲ್ಲಾ ಅಭಿನಯಿಸಿರುವುದು ವಿಶೇಷ.
 
ಚಿತ್ರದಲ್ಲಿ ತ್ರಿಷಾ ಅವರ ಪಾತ್ರ ಆಕ್ಷನ್‌ನಿಂದ ಕೂಡಿರುತ್ತದಂತೆ. ಉಗ್ರರ ಸೆರೆಯಲ್ಲಿರುವವರನ್ನು ಧೀರ ಮಹಿಳೆಯಾಗಿ ತ್ರಿಷಾ ಹೇಗೆ ಕಾಪಾಡುತ್ತಾರೆ ಎಂಬುದೇ ಚಿತ್ರದ ತಿರುಳು. ಹಾಲಿವುಡ್ ರೇಂಜ್‌ನಲ್ಲಿಈ ಸಿನಿಮಾ ನಿರ್ಮಿಸುತ್ತಿರುವುದಾಗಿ ಸುದ್ದಿ ಇದೆ. ತ್ರಿಷಾ ವೃತ್ತಿಬದುಕು ಈಗ ಹಳಿತಪ್ಪಿದ್ದು, ಈ ಚಿತ್ರದ ಮೂಲಕವಾದರೂ ಮತ್ತೆ ಹಳಿ ಹತ್ತುತ್ತಾ ನೋಡಬೇಕು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

’ಸೂಪರ್ ಜೋಡಿ 2’ಯಲ್ಲಿ ಹುಚ್ಚ ವೆಂಕಟ್, ಯಾರ ಜೋಡಿ?