Select Your Language

Notifications

webdunia
webdunia
webdunia
webdunia

’ಸೂಪರ್ ಜೋಡಿ 2’ಯಲ್ಲಿ ಹುಚ್ಚ ವೆಂಕಟ್, ಯಾರ ಜೋಡಿ?

’ಸೂಪರ್ ಜೋಡಿ 2’ಯಲ್ಲಿ ಹುಚ್ಚ ವೆಂಕಟ್, ಯಾರ ಜೋಡಿ?
Bangalore , ಬುಧವಾರ, 4 ಜನವರಿ 2017 (11:15 IST)
ನಟ, ನಿರ್ದೇಶಕ ಮತ್ತು ನಿರ್ಮಾಪಕ ಹುಚ್ಚ ವೆಂಕಟ್ ಯಾಕೋ ಸೈಲೆಂಟ್ ಆದ್ರಲ್ಲಾ ಅಂದ್ಕೊಳ್ತಿದ್ದಂತೆ ಮತ್ತೆ ವೈಲೆಂಟ್ ಆಗೋ ಸಮಯ ಬಂದಿದೆ. ಸ್ಟಾರ್ ಸುವರ್ಣ ವಾಹಿನಿಯ ರಿಯಾಲಿಟಿ ಶೋ ಸೂಪರ್ ಜೋಡಿ 2ರಲ್ಲಿ ಸ್ಪರ್ಧಿಯಾಗಿ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ.
 
ಅಕುಲ್ ಬಾಲಾಜಿ ನಿರೂಪಣೆಯ ಈ ಶೋ ಇದೇ ಜನವರಿ 7ರಂದು ರಾತ್ರಿ 8ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರಲಿದೆ. ಈ ಶೋ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗಲಿದೆ. ಹುಚ್ಚ ವೆಂಕಟ್ ಇತ್ತೀಚೆಗೆ ಬಿಗ್ ಬಾಸ್ ಸ್ಪರ್ಥಿ ಪ್ರಥಮ್ ಮೇಲೆ ಹಲ್ಲೆ ಮಾಡಿ ಸುದ್ದಿಯಾಗಿದ್ದರು. 
 
ಈ ಶೋನಲ್ಲಿ ಆದಿ ಲೋಕೇಶ್ ಮತ್ತವರ ಪತ್ನಿ, ನಟಿ ಸಂಗೀತ ಸಹ ಸ್ಪರ್ಧಿಸಲಿದ್ದಾರೆ. ಇನ್ನೊಂದು ಮೂಲದ ಪ್ರಕಾರ ಕಾಳಿ ಸ್ವಾಮಿ ಋಷಿಕುಮಾರ ಸಹ ತಮ್ಮ ಪತ್ನಿಯ ಜೊತೆಗೆ ಡ್ಯಾನ್ಸ್ ಮಾಡಲು ಆಗಮಿಸುತ್ತಿದ್ದಾರೆ. ವಿಶೇಷ ಎಂದರೆ ಹುಚ್ಚ ವೆಂಕಟ್‌ಗೆ ಜೋಡಿ ಯಾರು ಎಂಬುದು? ಹುಚ್ಚ ವೆಂಕಟ್ ಚಿತ್ರದ ನಾಯಕಿಯೇ ಅವರೊಂದಿಗೆ ಕುಣಿಯುವ ಜೋಡಿ ಎನ್ನಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

’ಗಾಳಿಪಟ 2’ ಹಾರಿಸಲಿರುವ ಯೋಗರಾಜ್ ಭಟ್-ಗಣೇಶ್