Webdunia - Bharat's app for daily news and videos

Install App

ಸಂಚಾರ ನಿಯಮ ಉಲ್ಲಂಘನೆ: ಖ್ಯಾತ ರಾಪರ್‌ ಬಾದ್‌ಶಾಗೆ ಬಿತ್ತು ಭಾರೀ ದಂಡ

Sampriya
ಮಂಗಳವಾರ, 17 ಡಿಸೆಂಬರ್ 2024 (19:34 IST)
Photo Courtesy X
ಗುರುಗ್ರಾಮ: ಗುರುಗ್ರಾಮದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ರಾಂಗ್ ಲೇನ್‌ನಲ್ಲಿ ವಾಹನ ಚಲಾಯಿಸಿದ್ದಕ್ಕಾಗಿ ದೇಶದ ಖ್ಯಾತ ರಾಪರ್ ಬಾದ್‌ಶಾಗೆ 15,500 ದಂಡ ವಿಧಿಸಲಾಗಿದೆ. ಮೂರು ಕಾರುಗಳನ್ನು ಒಳಗೊಂಡಿರುವ ಬಾದ್‌ಶಾ ಅವರ ಬೆಂಗಾವಲು ವಾಹಜನ ರಸ್ತೆಯ ರಾಂಗ್ ಸೈಡ್‌ನಲ್ಲಿ ಸಂಚಾರಿಸಿದ್ದಕ್ಕಾಗಿ ಇದೀಗ ಭಾರೀ ದಂಡವನ್ನು ಕಟ್ಟಬೇಕಾಗಿದೆ.

ಡಿಸೆಂಬರ್ 15 ರಂದು ಪಂಜಾಬಿ ಗಾಯಕ ಕರಣ್ ಔಜ್ಲಾ ಅವರ ಸಂಗೀತ ಕಚೇರಿಯನ್ನು ತಲುಪಲು ಮಹೀಂದ್ರಾ ಥಾರ್ ಅನ್ನು ಓಡಿಸುತ್ತಿದ್ದ ಬಾದ್‌ಶಾಹ್‌ಗೆ ಗುರುಗ್ರಾಮ್ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ.

ಆದರೆ, ಈ ವಾಹನವು ರಾಪರ್‌ಗೆ ಸೇರಿದ್ದಲ್ಲ ಮತ್ತು ಪಾಣಿಪತ್‌ನ ಯುವಕನ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಹೇಳಲಾಗುತ್ತಿದೆ.

ಬಾದ್‌ಶಾ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಪೋಸ್ಟ್ ವೈರಲ್ ಆದ ನಂತರ, ಗುರುಗ್ರಾಮ್ ಟ್ರಾಫಿಕ್ ಪೊಲೀಸರು ರಾಪರ್‌ಗೆ ಚಲನ್ ನೀಡಿದ್ದಾರೆ.

ಪಂಜಾಬಿ ಗಾಯಕ ಕರಣ್ ಔಜ್ಲಾ ಅವರ ಬೆಂಗಾವಲು ಪಡೆಯ 3 ವಾಹನಗಳು ಏರಿಯಾ ಮಾಲ್ ಕಡೆಗೆ ರಾಂಗ್ ಸೈಡ್‌ನಲ್ಲಿ ಹೋಗುತ್ತಿವೆ, ಮತ್ತು ಬೌನ್ಸರ್‌ಗಳು ಸಹ ಜನರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ, ಆದರೆ ಗುರುಗ್ರಾಮ್ ಪೊಲೀಸರು ಮಲಗಿದ್ದಾರೆ" ಎಂದು 'ಎಕ್ಸ್' ಬಳಕೆದಾರರು ಬರೆದಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments