ತಮಿಳು ನಟ ವಿಕ್ರಮ್ ಅಭಿನಯದ ಮುಂಬರುವ ಚಿತ್ರ 'ಇರು ಮುಘನ್ 'ಚಿತ್ರಕ್ಕೆ ಯೂ/ಎ ಸರ್ಟಿಫಿಕೇಟ್ ದೊರೆತಿದೆ. ಸೆಪ್ಟೆಂಬರ್ 8ಕ್ಕೆ ಚಿತ್ರ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಜಗತ್ತಿನ ಎಲ್ಲಾ ಕಡೆಗಳಲ್ಲೂ ಚಿತ್ರ ಬಿಡುಗಡೆಯಾಗಲಿದೆ.
ಈ ಚಿತ್ರದಲ್ಲಿ ವಿಕ್ರಮ್ ನಟಿ ನಯನತಾರಾ ಕಾಂಬಿನೇಷನ್ ಅಭಿಮಾನಿಗಳಿಗೆ ಮೋಡಿ ಮಾಡಲಿದೆ. ಇದೀಗ ಚಿತ್ರಕ್ಕೆ ಸಿಬಿಎಸ್‌ಸಿ ಕಡೆಯಿಂದ ಎಯು ಸರ್ಟಿಫಿಕೇಟ್ ದೊರೆತಿದೆ.
ನಿರ್ದೇಶಕ ಆನಂದ ಶೇಖರ್ ಅವರಿಗೆ ಇರು ಮುರ್ಘನ್ ಮೂರನೇಯ ಚಿತ್ರ. ಮೊದಲ ಬಾರಿಗೆ ವಿಕ್ರಮ್ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಮೊನ್ನೆ ನಟ ವಿಕ್ರಮ್ ತಮ್ಮ ಪುತ್ರಿಯ ಎಂಗೇಜ್‌ಮೆಂಟ್ ಮಾಡಿದ್ದರು. ವಿಕ್ರಮ್ ಪುತ್ರಿ ಅಕ್ಷಿತಾ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮನು ರಂಜಿತ್ ಎಂಬಾತರ ಜತೆಗೆ ವಿಕ್ರಮ್ ಪುತ್ರಿಯ ಎಂಗೇಜ್‌ಮೆಂಟ್ ಆಗಿತ್ತು. ಮನು ರಂಜೀತ್ ಖ್ಯಾತ ರಾಜಕಾರಿಣಿಯೊಬ್ಬರ ಮೊಮ್ಮಗ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ