ನಟ ಧನುಷ್ ಪ್ರೋಡೆಕ್ಷನ್ ನಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ನಟ ರಜನಿಕಾಂತ್ ನಟಿಸಲಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಬಗ್ಗೆ ಧನುಷ್ ಟ್ವಿಟರ್ ಬರೆದುಕೊಂಡಿದ್ದಾರೆ.. ಧನುಷ್ ಪ್ರೋಡೆಕ್ಷನ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ರಜನಿಕಾಂತ್ ತಾವು ನಿರ್ಮಾಣ ಮಾಡುತ್ತಿರುವ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ವಿಚಾರವನ್ನು ಧನುಷ್ ಅವರೇ ತಿಳಿಸಿದ್ದಾರೆ. ವಿಷೇಷವೆಂದರೆ ಕಬಾಲಿ ಚಿತ್ರವನ್ನು ನಿರ್ದೇಶನ ಮಾಡಿದ್ದ ಪ.ರಂಜಿತ್ ಈ ಚಿತ್ರಕ್ಕೂ ನಿರ್ದೇಶನ ಮಾಡಲಿದ್ದಾರೆ. ಇದು ಕಬಾಲಿ ಪಾರ್ಟ್ 2 ಎಂದು ಹೇಳುತ್ತಿದ್ದರು ಇದುವರೆಗೂ ಅಧಿಕೃತವಾಗಿ ಮಾಹಿತಿ ಇಲ್ಲ.
ಸದ್ಯ ರಜನಿಕಾಂತ್ ಸೈನ್ಸ್ ಫಿಕ್ಸನ್ 2.0 ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈ ಚಿತ್ರವನ್ನು ಎಸ್.ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷವೆಂದರೆ ಬಾಲಿವುಡ್‌ನ ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ರಜನಿಕಾಂತ್ ಜತೆಗೆ ಕಾಣಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ