ಮಾಡೆಲಿಂಗ್ ಕ್ಷೇತ್ರವಲ್ಲ, ಮಿಸ್ ಇಂಡಿಯಾ ಆಗಿಯೂ ಕಿರೀಟ ಮುಡಿಗೇರಿಸಿಕೊಂಡವರು ಇಶಾ ಗುಪ್ತಾ.. ಇದೀಗ ಟಾಲಿವುಡ್‌ನಲ್ಲಿ ನಟಿಸುತ್ತಿದ್ದಾರೆ. ಟಾಲಿವುಡ್ ನಟ ನಿಖಿಲ್ ಜತೆಗೆ ಮಿಂಚಲಿದ್ದಾರೆ. ಈ ಚಿತ್ರದಲ್ಲಿ ಇಶಾ ಸ್ಪೆಷಲೋ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರದಲ್ಲಿ ಪೊಲೀಸ್ ಆಫಿಸರ್ ರೋಲ್‌ನಲ್ಲಿ ಇಶಾ ಗುಪ್ತಾ ಕಾಣಿಸಿಕೊಳ್ಳುತ್ತಿದ್ದಾರೆ. ಹಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದ ಇಶಾ, ಟಾಲಿವುಡ್ ಚಿತ್ರಕ್ಕಾಗಿ ಅವರನ್ನು ಸಂಪರ್ಕಿಸಲಾಗಿತ್ತು. ಕಥೆ ಕೇಳಿದ ಇಶಾ ಚಿತ್ರಕ್ಕಾಗಿ ನಟಿಸುತ್ತೇನೆ ಎಂದು ಒಪ್ಪಿಗೆ ಸೂಚಿಸಿದ್ರು.
ಬಾಲಿವುಡ್‌ನ ಮುದ್ದಾದ ಚೆಲುವೆ ಇಶಾ, ಇದೀಗ ಕಮಾಂಡೋ-2 ಚಿತ್ರದಲ್ಲಿ 'ಖಳನಾಯಕಿ' ಪಾತ್ರದಲ್ಲಿ ಕಮಾಲ್ ಮಾಡಲು ಹೊರಟಿದ್ದಾಳೆ. ಮುಂಬರುವ ಚಿತ್ರ 'ಕಮಾಂಡೋ-2' ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ.
ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ ದೇವನ್ ಭೋಜಾನಿ, ವಿದ್ಯತ್ ಜಾಮ್‌ವಾಲ್ ಎದುರು ಖಳನಾಯಕಿಯಾಗುತ್ತಿದ್ದಾರೆ ಇಶಾ.. 2012ರಲ್ಲಿ 'ಜನ್ನತ್-2',' ರುಸ್ತುಮ್, 'ಹೇರಾ ಫೇರಿ-3' ಹಾಗೂ 'ರಂಗೂನ್' ಚಿತ್ರಗಳಲ್ಲೂ ಇಶಾ ಬ್ಯೂಸಿ ಇರುವ ನಟಿ...
ಅಲ್ಲದೇ ಇಶಾ ಕೇನಲ ನಟನೆಗೆ ಮಾತ್ರ ಸೀಮಿತವಾಗಿಲ್ಲ.. ತಮ್ಮ ಸಮಾಜಮುಖಿ ಕೆಲಸಗಳಲ್ಲಿ ಗಮನ ಸೆಳೆದಿದ್ದರು. ಈ ಹಿಂದೆ ಪ್ರಾಣಿ ಹಿಂಸೆ ವಿರುದ್ಧ ಧ್ವನಿ ಎತ್ತಿದ ಅವರು, ಬರಪೀಡಿತ ಮಹಾರಾಷ್ಟ್ರದ ಜಿಲ್ಲೆಗಳಿಗೆ ತಮ್ಮದೇ ಆದ ರೀತಿಯಲ್ಲಿ ನೆರವಿನ ಹಸ್ತ ಚಾಚಿದವರು.
ತಮ್ಮ ಡಿಸೈನರ್ ಬಟ್ಟೆಗಳನ್ನು ಇಶಾ ಹರಾಜು ಹಾಕಲು ಮುಂದಾಗಿದ್ದರು. ಅದರಿಂದ ಬರುವ ಹಣವನ್ನು ಮಹಾರಾಷ್ಟ್ರ ಬರಪೀಡಿತ ಪ್ರದೇಶಗಳಿಗೆ ಸರಬರಾಜು ಮಾಡಿದ್ದರು. ಅಲ್ಲದೇ ಸಮಸ್ಯೆಗೆ ಸಿಲುಕಿರುವ ರೈತರ ನೆರವಿಗೆ ಧಾವಿಸುವಂತೆ ಕರೆ ನೀಡಿದ್ದರು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ