Select Your Language

Notifications

webdunia
webdunia
webdunia
webdunia

'ಕಬಾಲಿ' ಚಿತ್ರ ವೀಕ್ಷಿಸಿದ ನಟಿ ವಿದ್ಯಾ ಬಾಲನ್

'ಕಬಾಲಿ' ಚಿತ್ರ ವೀಕ್ಷಿಸಿದ ನಟಿ ವಿದ್ಯಾ ಬಾಲನ್
ಮುಂಬೈ , ಸೋಮವಾರ, 25 ಜುಲೈ 2016 (18:57 IST)
'ಕಬಾಲಿ' ಚಿತ್ರ ಹೌಸ್‌ಫುಲ್ ಆಗಿ ಮುನ್ನುಗ್ಗುತ್ತಿದೆ. ಈ ಹಿನ್ನಲೆ ಕಬಾಲಿ ಚಿತ್ರ ಮೊದಲ ದಿನದಲ್ಲೇ 100 ಕೋಟಿ ಗಳಿಕೆ ಕಾಣುವುದರ ಜತೆಗೆ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈ ಹಿನ್ನೆಲೆ ಬಾಲಿವುಡ್ ನಟಿ ವಿದ್ಯಾ ಬಾಲನ್ ಕಬಾಲಿ ಚಿತ್ರವನ್ನು ವೀಕ್ಷಿಸಿದ್ದಾರೆ. ಮುಂಬೈನ ಅರೋರಾ ಥಿಯೇಟರ್‌ಗೆ ಬಂದ ವಿದ್ಯಾ ಬಾಲನ್ ಹಾಗೂ ಪತಿ ಸಿದ್ದಾರ್ಥ ರಾಯ್ ಕಪೂರ್ ಇಬ್ಬರು ಒಟ್ಟಿಗೆ ಬಂದು ಸಿನಿಮಾ ವೀಕ್ಷಣೆ ಮಾಡಿದ್ರು.



'ಕಬಾಲಿ' ಕಳೆದ ವಾರ ರಿಲೀಸ್ ಆಗಿತ್ತು. ಚಿತ್ರ ವೀಕ್ಷಿಸಲು ವಿದ್ಯಾಬಾಲನ್ ಪತಿ ಸಿದ್ದಾರ್ಥ ರಾಯ್ ಕಪೂರ್ ಹಾಗೂ ಪೋಷಕರಾದ ಸರಸ್ವತಿ ಹಾಗೂ ಪಿ.ಆರ್ ಬಾಲನ್ ಜತೆಗೆ ಬಂದು ಸಿನಿಮಾ ವೀಕ್ಷಣೆ ಮಾಡಿದ್ದರು. ಈ ವೇಳೆ ನೆರೆದಿದ್ದ ಅಭಿಮಾನಿಗಳಿಗೆ ವಿದ್ಯಾ ಬಾಲನ್ ಕೈ ಬೀಸಿ ಪೋಸ್ ಕೂಡ ನೀಡಿದ್ರು. 

ಇನ್ನೂ ರಜನಿಕಾಂತ್ ಅಮೇರಿಕಾದಿಂದ ಭಾರತಕ್ಕೆ ವಾಪಸ್ ಆಗಿದ್ದಾರೆ. ರಜನಿ ಕೆಲ ದಿನಗಳಿಂದ ಅಮೇರಿಕಾಕ್ಕೆ ಹಾರಿದ್ದರು. ಕಬಾಲಿ ರಿಲೀಸ್ ವೇಳೆ ಅವರು ಭಾರತದಲ್ಲಿ ಇರಲಿಲ್ಲ. ಜುಲೈ 21ರಂದು ರಜನಿಕಾಂತ್ ಕಬಾಲಿ ಚಿತ್ರವನ್ನು ಅಮೇರಿಕಾದಲ್ಲೇ ವೀಕ್ಷಣೆ ಮಾಡಿದ್ದರು.

ಅಗಸ್ಟ್ ಮೊದಲ ವಾರದಂದು ರಜನಿಕಾಂತ್ 2.0 ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಈ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಜತೆಗೆ ಮೊದಲ ಬಾರಿಗೆ ರಜನಿಕಾಂತ್ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ. ರಜನಿಕಾಂತ್ 2.0 ಚಿತ್ರದ ಶೂಟಿಂಗ್ ಅದಷ್ಟು ಮುಗಿಸುವುದಕ್ಕೆ ಕಾಯುತ್ತಿದ್ದಾರೆ. ಯಾಕಂದರೆ ಅವರ ಮುಂದಿನ ಚಿತ್ರ ಮೋರ್ಯಾಕೋ ಚಿತ್ರದಲ್ಲಿ ಬ್ಯೂಸಿಯಾಗಲಿದ್ದಾರೆ. 
 
ಒಟ್ಟು 350 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗುತ್ತಿರುವ 2.0 ಚಿತ್ರ, ರಜನಿಕಾಂತ್, ಅಕ್ಷಯ್‌ಕುಮಾರ್, ಆಮಿ ಜಾಕ್ಷನ್ ನೀಡುವ ಸಂಭಾವನೆಯ ಮೊತ್ತವೇ 150 ಕೋಟಿ ರೂ. ಮೀರಿದೆಯಂತೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಟ್ವಿಂಕಲ್ ಖನ್ನಾ ನಾಸಿರುದ್ದೀನ್ ಶಾ ನಡುವೆ ಟ್ವಿಟರ್ ವಾರ್