ಹಿರಿಯ ನಟ ದಿಲೀಪ್ ಕುಮಾರ್ ಇನ್ನಿಲ್ಲ

Webdunia
ಬುಧವಾರ, 7 ಜುಲೈ 2021 (09:03 IST)
ಮುಂಬೈ: ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.


ಟ್ರಾಜಿಡಿ ಕಿಂಗ್ ಎಂದೇ ಕರೆಯಿಸಿಕೊಳ್ಳುತ್ತಿದ್ದ ದಿಲೀಪ್ ಕುಮಾರ್ ಇಂದು ಬೆಳಿಗ್ಗೆ 7.30 ಕ್ಕೆ ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದ್ದಾರೆ. ಪತ್ನಿ ಹಾಗೂ ಪುತ್ರಿ, ನಟಿ ಸಾಯಿರಾ ಬಾನು ಹಾಗೂ ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಉಸಿರಾಟದ ತೊಂದರೆ ಹಿನ್ನಲೆಯಲ್ಲಿ ಅವರನ್ನು ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಯೂಸುಫ್ ಖಾನ್ ಎಂಬುದು ಅವರ ಮೂಲ ಹೆಸರಾಗಿತ್ತು. ಸಿನಿರಂಗಕ್ಕೆ ಕಾಲಿಟ್ಟ ಮೇಲೆ ದಿಲೀಪ್ ಕುಮಾರ್ ಎಂದು ಗುರುತಿಸಿಕೊಂಡಿದ್ದರು. ತಮ್ಮದೇ ವಿಶಿಷ್ಟ ಭಾವನಾತ್ಮಕ ಅಭಿನಯ, ವಿಶೇಷ ಮ್ಯಾನರಿಸಂನಿಂದ ಐದು ದಶಕಗಳ ಕಾಲ ಸಿನಿ ಪ್ರಿಯರನ್ನು ರಂಜಿಸಿದ್ದರು. ದೇವದಾಸ್, ಮುಘಲ್ ಎ ಅಜಮ್, ರಾಮ್ ಔರ್ ಶ್ಯಾಮ್, ನಯಾ ದೌರ್ ಇತ್ಯಾದಿ ಅವರು ನಟಿಸಿದ ಹಿಟ್ ಸಿನಿಮಾಗಳಾಗಿವೆ. ಅವರ ನಿಧನಕ್ಕೆ ಬಾಲಿವುಡ್, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮೈಕೊರೆಯುವ ಚಳಿಗಾಗಿ ಹೆಚ್ಚುವರಿ ಕಂಬಳಿಗೆ ದರ್ಶನ್‌ ಬೇಡಿಕೆ: ಅಸ್ತು ಎಂದ ಕೋರ್ಟ್‌

ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದ್ದಲ್ಲ: ಪುರುಷೋತ್ತಮ ಬಿಳಿಮಲೆ

ಧನ್ವೀರ್ ಹೇಳಿಕೆಯಿಂದ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಷ್ಟ

ದಿಡೀರನೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಯಶ್ ತಾಯಿ ಪುಪ್ಪಾ

ಮುಂದಿನ ಸುದ್ದಿ
Show comments