'ಆಶಿಕ್ ಬನಾಯಾ ಆಪ್‌ನೆ' ಹಾಡಿನಲ್ಲಿ ಹಾಟ್ ಆಗಿ ಮಿಂಚುತ್ತಿರುವ ಊರ್ವಶಿ ರೌಟೇಲಾ..!!

ನಾಗಶ್ರೀ ಭಟ್
ಸೋಮವಾರ, 5 ಫೆಬ್ರವರಿ 2018 (17:08 IST)
ತನ್ನ ಮಾದಕ ಸೌಂದರ್ಯದಿಂದ ಹಲವಾರು ಅಭಿಮಾನಿಗಳನ್ನು ಹೊಂದಿರುವ ಬೆಕ್ಕಿನ ಕಣ್ಣಿನ ಈ ಸುಂದರಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಇವರು ಹೇಟ್ ಸ್ಟೋರಿ 4 ರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಈ ಚಿತ್ರದ ಹಿಂದಿನ ಭಾಗಗಳಂತೆ ಈ ಚಿತ್ರವೂ ಸಹ ಬ್ಲಾಕ್‌ಬಸ್ಟರ್ ಆಗಲಿದೆ ಎನ್ನಲಾಗುತ್ತಿದೆ.
ಹೇಟ್ ಸ್ಟೋರಿ 4 ರ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು ಕೇವಲ 24 ಗಂಟೆಗಳಲ್ಲಿ ಒಂದು ಮಿಲಿಯನ್ ವೀಕ್ಷಣೆಗಳನ್ನು ತಲುಪಿದೆ. ಹೇಟ್ ಸ್ಟೋರಿ ಮತ್ತು ಹೇಟ್ ಸ್ಟೋರಿ-2 ಚಿತ್ರಗಳು ಸಸ್ಪೆನ್ಸ್ ಮತ್ತು ಥ್ರಿಲ್ಲರ್‌ನೊಂದಿಗೆ ಅದ್ಭುತವಾಗಿದ್ದು ಹೇಟ್ ಸ್ಟೋರಿ-3 ಚಿತ್ರ ಅಷ್ಟೊಂದು ಸಂತೋಷವನ್ನು ನೀಡಿರಲಿಲ್ಲ. ಆದರೆ 'ಹೇಟ್ ಸ್ಟೋರಿ-4' ಚಿತ್ರದ ಮೇಲೆ ಜನರು ಹೆಚ್ಚು ಭರವಸೆಯನ್ನಿಟ್ಟುಕೊಂಡಿದ್ದಾರೆ.
 
ಹೇಟ್ ಸ್ಟೋರಿಯ ಹಿಂದಿನ ಭಾಗಗಳಲ್ಲಿ ನಟಿಸಿದ ಪಾವೋಲಿ ಡ್ಯಾಮ್, ಸುರ್ವೀನ್ ಛಾವ್ಲಾ ಮತ್ತು ಝರೀನ್ ಖಾನ್ ಈ ಮೂವರೂ ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದು ತಮ್ಮ ಬಹುಮುಖ ಪ್ರತಿಭೆಯನ್ನು ಪರದೆಯ ಮೇಲೆ ಮೂಡಿಸಿದ್ದರು. ಹೇಟ್ ಸ್ಟೋರೀಸ್ ಚಿತ್ರಗಳ ಎಲ್ಲಾ ಕಥೆಗಳೂ ಕಾಮಪ್ರಚೋದಕ ಥ್ರಿಲ್ಲರ್ ಆಗಿದ್ದು ಈ ಮೂವರು ನಟಿಯರೂ ತಮ್ಮ ಹಾವ ಭಾವಗಳು ಮತ್ತು ಡ್ಯಾನ್ಸ್‌ಗಳಿಂದ ಪರದೆಯಲ್ಲಿ ಬಿಸಿಯನ್ನು ಹೆಚ್ಚಿಸಿದ್ದು ಈಗ ಊರ್ವಶಿ ರುಟೇಲಾ ಸರದಿಯಾಗಿದೆ.
 
ಚಿತ್ರದ ತಯಾರಕರು ಚಿತ್ರದ ಈ ಪ್ರಚಾರವನ್ನು ಹಾಗೆಯೇ ಮುಂದುವರೆಸಲು ಹಿಮೇಶ್ ರೇಶ್ಮಿಯಾನ್ ಅವರ ಹಳೆಯ ಹಾಡು 'ಆಶಿಕ್ ಬನಾಯಾ ಅಪನೆ' ಯ ಹೊಸ ಟ್ರ್ಯಾಕ್ ಅನ್ನು ಬಿಡುಗಡೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಿನಿಮಾ ಸಕ್ಸಸ್ ಖುಷಿ ಮಧ್ಯೆ ದಿಢೀರ್ ಎಚ್ ಡಿ ದೇವೇಗೌಡರನ್ನು ಭೇಟಿಯಾದ ರಿಷಬ್

BBK12: ರಕ್ಷಿತಾಗೆ ಈಡಿಯಟ್ ಎಂದ ಅಶ್ವಿನಿ: ನಟ್ಟು ಬೋಲ್ಟ್ ಟೈಟ್ ಮಾಡಿ ಎಂದ ನೆಟ್ಟಿಗರು: video

ಕಾಮಿಡಿ ಕಿಲಾಡಿಗಳಿಂದಲೂ ಮಾಸ್ಟರ್ ಆನಂದ್ ಹೊರಬಂದ್ರಾ

ಸುಹಾನಾ ಸಯ್ಯದ್ ಮದುವೆ ಡೇಟ್ ಫಿಕ್ಸ್‌, ಸರಳ ವಿವಾಹವಾಗಲಿದ್ದಾರೆ ಗಾಯಕಿ

ಗರ್ಭಾವಸ್ಥೆಯ ಬಗ್ಗೆ ಸೋನಾಕ್ಷಿ ಸಿನ್ಹಾಗೆ ಎಲ್ಲರ ಮುಂದೆಯೇ ಕಾಲೆಳೆದ ಪತಿ ಜಹೀರ್ ಇಕ್ಬಾಲ್‌

ಮುಂದಿನ ಸುದ್ದಿ