Select Your Language

Notifications

webdunia
webdunia
webdunia
webdunia

ಪರಿಣಾಮಕಾರಿ ಮಾದಕ ಸೌಂದರ್ಯದ ಗುಟ್ಟನ್ನ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ

ಪರಿಣಾಮಕಾರಿ ಮಾದಕ ಸೌಂದರ್ಯದ ಗುಟ್ಟನ್ನ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ
mumbai , ಭಾನುವಾರ, 5 ಮಾರ್ಚ್ 2017 (12:09 IST)
ಪ್ರಿಯಾಂಕಾ ಚೋಪ್ರಾ.. ಬಾಲಿವುಡ್ ಅಷ್ಟೇ ಅಲ್ಲ ಹಾಲಿವುಡ್`ನಲ್ಲೂ ಹೆಸರು ಮಾಡಿದ ನಟಿ. ತನ್ನ ಸ್ನಿಗ್ದ ಸೌದರ್ಯ, ಮಾದಕ ನೋಟದ ಮೂಲಕ ಆಕರ್ಷಿಸುವ ಮೋಹಕ ನಟಿ. ಅಂದಹಾಗೆ, ಈ ನಟಿ ತನ್ನ ಸೌಂದರ್ಯದ ಗುಟ್ಟನ್ನ ಇತ್ತೀಚೆಗೆ ತಾನೇ ಬಿಚ್ಚಿಟ್ಟಿದ್ದಾಳೆ.


ನಟಿಯರೆಂದರೆ ದುಬಾರಿ ಕಾಸ್ಮೆಟಿಕ್ ಮೂಲಕ ತಮ್ಮ ಸೌಂದರ್ಯ ಕಾಪಾಡಿಕೊಂಡಿರುತ್ತಾರೆ ಎಂಬ ಮಾತಿಗೆ ಅಪವಾದವೆಂಬಂತಿರುವ ತಮ್ಮ ದೇಸಿ ರೆಸಿಪಿಗಳ ಸೀಕ್ರೆಟನ್ನ ಪ್ರಿಯಾಂಕಾ ಬಿಚ್ಚಿಟ್ಟಿದ್ದಾರೆ. ಪ್ರಿಯಾಂಕಾ ಚೋಪ್ರಾ ತಮ್ಮ ಅಜ್ಜಿಯಿಂದ ಪಡೆದ 3 ಸೌಂದರ್ಯ ರೆಸಿಪಿಗಳು ಇಲ್ಲಿವೆ ನೋಡಿ.

ಬಾಡಿ ಸ್ಕ್ರಬ್: ಪ್ರಿಯಾಂಕಾ ಹೇಳುವ ಪ್ರಕಾರ  ಬಾಡಿ ಸ್ಕ್ರಬ್ ಚರ್ಮ ಮತ್ತು ಒಡೆದ ಹಿಮ್ಮಡಿಗಳಲ್ಲಿ ತೇವಾಂಶ ಕಾಯ್ದುಕೊಳ್ಳುವ ಜೊತೆಗೆ ಉತ್ತಮ ಪೋಷಣೆ ಒದಗಿಸುತ್ತದೆ..

ತಯಾರಿಸುವ ಬಗೆ: ಒಂದು ಬಟ್ಟಲಿಗೆ ಒಂದು ಕಪ್ ಕಡಲೆಹಿಟ್ಟನ್ನ ಹಾಕಿ, ಒಂದು ಟೇಬಲ್ ಸ್ಪೂನ್ ಮೊಸರು ಹಾಕಿ, ಎರಡನ್ನೂ ಕಲಸಿ ಪೇಸ್ಟ್ ಮಾಡಿಕೊಳ್ಳಿ. ದು ಸಣ್ನ ನಿಂಬೆಹಣ್ಣನ್ನ ಹಿಂಡಿ. ಮತ್ತಷ್ಟು ಉತ್ಕೃಷ್ಟತೆಗೆ ಸ್ವಲ್ಪ ಗಂಧವ ಪುಡಿ ಹಾಕಿ, ಚಿಟಿಕೆ ಅರಿಶಿನ ಪುಡಿ ಹಾಕಿ(ಹೆಚ್ಚು ಬೇಡ) ಕಲಸಿಕೊಳ್ಳಿ.

ತಯಾರಾದ ಪೇಸ್ಟ್ ಅನ್ನ ಚರ್ಮಕ್ಕೆ ಹಚ್ಚಿ ಒಣಗಲು ಬಿಡಿ. ಬಳಿಕ ನಿದಾನವಾಗಿ ಒರೆಸಿ ತೊಳೆದುಬಿಡಿ.

ಲಿಪ್ ಸ್ಕ್ರಬ್: ಒಡೆದ ತುಟಿಗೆ  ಲಿಪ್ ಸ್ಕ್ರಬ್ ಇದು ರಾಮಬಾಣ. ಮನೆಯಲ್ಲೇ ಸಿಗುವ ವಸ್ತುಗಳನ್ನ ಬಳಸಿ ಸರಳ ಮತ್ತು ಪರಿಣಾಮಕಾರಿಯಾದ ಲಿಪ್ ಸ್ಕ್ರಬ್ ತಯಾರಿಸುವ ರೆಸಿಪಿಯನ್ನ ಪ್ರಿಯಾಂಕ ಬಿಚ್ಚಿಟ್ಟಿದ್ದಾರೆ.

ತಯಾರಿಸುವ ಬಗೆ: ಒಂದು ಬಟ್ಟನಿಗೆ ಸ್ವಲ್ಪ ಸಮುದ್ರದ ಉಪ್ಪನ್ನ ಹಾಕಿ.ಅದಕ್ಕೆ ಸ್ವಲ್ಪ ವೆಜಿಟೆಬಲ್ ಗ್ಲಿಸರಿನ್ ಹಾಕಿ. ರೋಸ್ ವಾಟರ್ ಹಾಕಿ ಬೆರೆಸಿ ತುಟಿಗೆ ಹಚ್ಚಿ. ಸ್ವಲ್ಪ ಸಮಯದ ಬಳಿಕ ತೊಳೆದರೆ ಸಾಕು.

ತಲೆಕೂದಲಿನ ಬೇರಿಗೆ ಚಿಕಿತ್ಸೆ: ಒಣಕೂದಲು, ಡ್ಯಾಂಡ್ರಪ್ ಸಮಸ್ಯೆ ಉಳ್ಳವರಿಗೆ ಕ್ವಾಟಿಂಕೋ ನಟಿ ಒಳ್ಳೆಯ ರೆಸಿಪಿ ನೀಡಿದ್ದಾರೆ.
ತಯಾರಿಸುವ ಬಗೆ: ಒಂದು ಬಟ್ಟಲು ಮೊಸರಿಗೆ ಒಂದು ಟೀ ಸ್ಪೂನ್ ಜೇನುತುಪ್ಪ ಬೆರೆಸಿ. ಕೂದಲು ಮತ್ತೆ ಸ್ಕ್ಯಾಲ್ಪ್`ಗೆ ಹಚ್ಚಿ ಅರ್ಧ ಗಂಟೆ ಕಾಲ ಒಣಗಲು ಬಿಡಿ. ಬಳಿಕ ಬೇಬಿ ಶ್ಯಾಂಪೂ ಅಥವಾ ಶುದ್ಧನೀರಿನಿಂದ ತೊಳೆಯಿರಿ.





Share this Story:

Follow Webdunia kannada

ಮುಂದಿನ ಸುದ್ದಿ

ಕಾಫಿ ಚಹಾ ಸೇವನೆ ಕಣ್ಣಿನ ಆರೋಗ್ಯಕ್ಕೆ ಹೇಗೆ ಹಾನಿಕಾರಕ?