ಉಡ್ತಾ ಪಂಜಾಬ್ ಸಿನಿಮಾದಲ್ಲಿನ ಆಲಿಯಾ ಭಟ್ ಅವರ ಲುಕ್ ಮೊದಲ ಬಾರಿಗೆ ರಿಲೀಸ್ ಆದಾಗಲೇ ಅಭಿಮಾನಿಗಳು ಈ ಸಿನಿಮಾದಲ್ಲಿ ಆಲಿಯಾ ಅವರು ಭರ್ಜರಿ ಪರ್ಫಾಮೆನ್ಸ್ ನೀಡುತ್ತಾರೆ ಅಂತಾ ಅಂದುಕೊಂಡಿದ್ದರು.ಆಲಿಯಾ ಅವರು ಫಸ್ಟ್ ಲುಕ್ ನಲ್ಲಿ ಪಕ್ಕಾ ಬಿಹಾರಿ ಹುಡುಗಿಯಂತೆ ಕಾಣಿಸಿಕೊಂಡಿದ್ದರು. ಇದೀಗ ಸಿನಿಮಾ ರಿಲೀಸ್ ಆಗಿದ್ದು ಅಭಿಮಾನಿಗಳು ಆಲಿಯಾ ಅಭಿನಯವನ್ನು ಹಾಡಿ ಹೊಗಳುತ್ತಿದ್ದಾರೆ.
ಆಲಿಯಾ ಭಟ್ ಅವರು ತಾವು ಇದುವೆರೆಗೂ ಅಭಿನಯಿಸಿದ ಎಲ್ಲಾ ಸಿನಿಮಾಗಳಲ್ಲೂ ಅಭಿಮಾನಿಗಳಿಗೆ ನೆನಪಿನಲ್ಲಿ ಉಳಿಯುವಂತಹ ಪರ್ಫಾಮೆನ್ಸ್ ನೀಡಿದ್ದಾರೆ. ಈ ಹಿಂದೆ ರಿಲೀಸ್ ಆಗಿರುವ ಸ್ಟೂಡೆಂಟ್ ಆಫ್ ದಿ ಇಯರ್, ಕಪೂರ್ ಆಂಡ್ ಸನ್ಸ್ ಈ ಎಲ್ಲಾ ಸಿನಿಮಾಗಳಲ್ಲೂ ಅವರ ಅಭಿನಯ ಮೆಚ್ಚುವಂತಹದ್ದು.
ಇದೀಗ ಉಡ್ತಾ ಪಂಜಾಬ್ ಸಿನಿಮಾದಲ್ಲೂ ಆಲಿಯಾ ಅವರು ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಪಕ್ಕಾ ಬಿಹಾರಿ ಹುಡುಗಿಯಂತೆ ಆಲಿಯಾ ಅವರು ಅಭಿನಯಿಸಿದ್ದಾರೆ ಅಂತಾ ಅಭಿಮಾನಿಗಲು ಹಾಡಿ ಹೊಗಳುತ್ತಿದ್ದಾರೆ.
ಇನ್ನು ಸಿನಿಮಾ ರಿಲೀಸ್ ಗೂ ಮುನ್ನವೇ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.ಅಲ್ಲದೇ ರಿಲೀಸ್ ಗೆ ಮುನ್ನವೇ ಆನ್ ಲೈನ್ ಸಿನಿಮಾ ಲೀಕ್ ಆಗಿ ಸಿನಿಮಾ ತಂಡ ಫುಲ್ ತಲೆಕೆಡಿಸಿಕೊಂಡಿತ್ತು.ಆಲಿಯಾ ಅವರಿಗೂ ಮೇಲಿಂದ ಮೇಲಾದ ಆಘಾತ ಭಾರೀ ನೋವನ್ನುಂಟು ಮಾಡಿತ್ತು.ಆದ್ರೀಗ ತನ್ನ ಅಭಿನಯಕ್ಕೆ ಉತ್ತಮ ರಸ್ಪಾನ್ಸ್ ಸಿಕ್ಕಿರೋದು ಅವರಿಗೆ ಖುಷಿ ತಂದಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ