ನಟ ಇಮ್ರಾನ್ ಹಶ್ಮಿ 'ಅಜರ್' ಚಿತ್ರ ಫ್ಲಾಪ್ ಬಳಿಕ ಇನ್ಮುಂದೆ ನಿರ್ಮಾಣದತ್ತ ಮುಖ ಮಾಡಿದ್ದಾರೆ. ತಮ್ಮ ಹೊಸ ಜರ್ನಿ ಬಗ್ಗೆ ಇಮ್ರಾನ್ ಹಶ್ಮಿ ಶೇರ್ ಮಾಡಿದ್ದು, ತಮ್ಮದೇ ಆದ ಹೋಮ್ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣ ಮಾಡಲಿದ್ದಾರೆ.ಇದಕ್ಕಾಗಿ ಕೆಲ ಕಟೆಂಟ್‌ಗಳನ್ನು ಬರೆದಿರುವ ಇಮ್ರಾನ್ ಹಶ್ಮಿ ಪ್ರೇಕ್ಷಕರ ಅಭಿಪ್ರಾಯವನ್ನು ಪಡೆಯಲು ಮುಂದಾಗಿದ್ದಾರೆ.
ನಿರ್ಮಾಪಕ ಟೋನಿ ಡಿಸೋಜಾ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಅಲ್ಲದೇ ನನ್ನ ಉತ್ತಮ ಸ್ನೇಹಿತರಾಗಿದ್ದಾರೆ ಎಂದು ಆ್ಯಕ್ಟರ್ ಇಮ್ರಾನ್ ಹಶ್ಮಿ ತಿಳಿಸಿದ್ದಾರೆ.
ಅದಲ್ಲದೇ ಇದೇ ವೇಳೆ ಇಮ್ರಾನ್ ಹಶ್ಮಿ ಪ್ರೇಕ್ಷಕರ ಮುಂದೆ ಕೆಲ ಕಟೆಂಟ್ ಗಳನ್ನು ಶೇರ್ ಮಾಡಿದ್ದಾರಂತೆ. ಟೋನಿ ಡಿಸೋಜಾ ಜತೆಗೂಡಿ ಇಮ್ರಾನ್ ಅಜರ್ ಚಿತ್ರದಲ್ಲಿ ಕೆಲಸ ಮಾಡಿದ್ದರು. ಅಲ್ಲದೇ ಭವಿಷ್ಯದಲ್ಲೂ ಇವರ ಜತೆಗೂಡಿ ಇಮ್ರಾನ್ ಹಶ್ಮಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇವರ ಜತೆಗೆ ಕೆಲಸ ಮಾಡಲು ಖುಷಿ ತಂದಿದೆ ಎಂದು ಇಮ್ರಾನ್ ಹಶ್ಮಿ ಇದೇ ವೇಳೆ ತಿಳಿಸಿದ್ದಾರೆ.
ಕಳೆದ ತಿಂಗಳು ತೆರೆಕಂಡಿದ್ದ 'ಅಜರ್' ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತಿಲ್ಲ.. ಇಮ್ರಾನ್ ಹಶ್ಮಿ ಹಾಗೂ ಪ್ರಾಂಚಿ ದೇಸಾಯಿ ಕಾಂಬಿನೇಷನ್‌ನಲ್ಲಿ ಬಂದಂತಹ ಚಿತ್ರ ಜನರನ್ನು ಗೆಲ್ಲುವಲ್ಲಿ ವಿಫಲವಾಗಿತ್ತು.
ಒಂದು ಚಿತ್ರ ಬಾಕ್ಸ್ ಆಫೀಸ್‍ಗಾಗಿ ನಿರ್ಮಾಣವಾಗುವುದಿಲ್ಲ.. ಬಹಳಷ್ಟು ಸಲ ಸಣ್ಣ ಪಾತ್ರಗಳು ಮಾಡುವ ಸಂದರ್ಭ ಒದಗಿ ಬರುತ್ತದೆ. ಅಲ್ಲಿ ನಟನೆ ಮಾಡುವುದು ಮುಖ್ಯವಾಗುತ್ತದೆ 'ಕಲಾವಿದ ಏನಾದರೂ ಹೊಸತನ್ನು ಮಾಡಲು ಇಚ್ಛಿಸುತ್ತಾನೆ.. ಕೆಲವೊಂದು ಬಾರಿ ಸಣ್ಣ ಪಾತ್ರಗಳನ್ನು ಮಾಡಬೇಕಾಗುತ್ತದೆ. ಆ ವೇಳೆ ಅಭಿನಯ ಮುಖ್ಯವಾದದ್ದು' ಎಂದು ಚಿತ್ರದ ಫ್ಲಾಪ್ ಕುರಿತಂತೆ ಇಮ್ರಾನ್ ಹಶ್ಮಿ ಹೇಳಿಕೆ ನೀಡಿದ್ದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ