ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಬ್ರಹ್ಮೋತ್ಸವಮ್ ಚಿತ್ರ ತೆರೆಗೆ ಬರುತ್ತಿರುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ಸಂಗತಿ.. ಇನ್ನೂ ಬ್ರಹ್ಸೋತ್ಸವಮ್ ಚಿತ್ರತಂಡ ಎರಡು ಹಾಡುಗಳನ್ನು ತೆಗೆದುಹಾಕಲು ನಿರ್ಧರಿಸಿದೆಯಂತೆ!
ಅಂದಹಾಗೆ ಈ ಚಿತ್ರ ಮೇ 20ರಂದು ರಿಲೀಸ್ ಆಗುವ ಸಾಧ್ಯತೆಗಳಿವೆ.. ಮಹೇಶ ಬಾಬು ಅಭಿಮಾನಿಗಳಿಗಂತೂ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದ್ದು, ಚಿತ್ರ ಅದ್ಯಾವಾಗ ಬಿಡುಗಡೆಯಾಗುತ್ತೋ ಎಂಬ ನಿರೀಕ್ಷೆಯಲ್ಲಿದ್ದಾರೆ.
ಇನ್ನೂ ಚಿತ್ರವು ತುಂಬಾ ಸಮಯವನ್ನು ತೆಗೆದುಕೊಳ್ಳುತ್ತದೆಯಂತೆ.. ದೀರ್ಘ ಸಮಯವನ್ನು ತೆಗೆದುಕೊಳ್ಳುತ್ತದೆ. ಅಲ್ಲದೇ ಚಿತ್ರ 2 ಗಂಟೆ 35 ನಿಮಿಷ ಹೊಂದಿದೆ.
ಹಾಗಾಗಿ ಚಿತ್ರವನ್ನು 2 ಗಂಟೆ 20ನಿಮಿಷಕ್ಕೆ ಫಿಕ್ಸ್ ಮಾಡಲು ಚಿತ್ರ ತಂಡ ನಿರ್ಧಾರ ತೆಗೆದುಕೊಂಡಿದೆ. ಇನ್ನೂ ಚಿತ್ರವು ತುಂಬಾ ಟೈಮ್ ತೆಗೆತುಕೊಳ್ಳಲಿದೆ ಅನ್ನೋದು ಮಹೇಶ ಬಾಬು ಅಭಿಪ್ರಾಯಪಟ್ಟಿದ್ದಾರಂತೆ..
ಆದ್ದರಿಂದ ಚಿತ್ರದಲ್ಲಿ ಕೆಲ ಬದಲಾವಣೆಗಳನ್ನು ತರ ಲು ಚಿತ್ರತಂಡ ನಿರ್ಧರಿಸಿದೆ. ಅಲ್ಲದೇ ಇವತ್ತು ಚಿತ್ರದ ಆಡಿಯೋ ಕೂಡ ಬಿಡುಗಡೆಯಾಗಲಿದೆ. ಈ ವೇಳೆ ಮಹೇಶ್ ಬಾಬು ಸೇರಿದಂತೆ ಸಮಂತಾ ಪ್ರಭು , ಪರಿಣಿತಾ ಸುಭಾಶ್, ಕಾಜಲ್ ಅಗರ್‌ವಾಲ್ ಆಡಿಯೋ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.