Select Your Language

Notifications

webdunia
webdunia
webdunia
webdunia

ತನುಶ್ರೀ ದತ್ತಾಗೆ ಬಟ್ಟೆ ಬಿಚ್ಚಿ ನರ್ತಿಸಲು ಹೇಳಿದರಂತೆ ಈ ನಿರ್ದೇಶಕ!

ತನುಶ್ರೀ ದತ್ತಾಗೆ ಬಟ್ಟೆ ಬಿಚ್ಚಿ ನರ್ತಿಸಲು ಹೇಳಿದರಂತೆ ಈ ನಿರ್ದೇಶಕ!
ಮುಂಬೈ , ಶುಕ್ರವಾರ, 28 ಸೆಪ್ಟಂಬರ್ 2018 (13:52 IST)
ಮುಂಬೈ: ಮೊನ್ನೆಯಷ್ಟೇ ನಾನಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿದ್ದ ತನುಶ್ರೀ ದತ್ತಾ ಈಗ ನಿರ್ದೇಶಕರ ವಿರುದ್ಧ ಹೇಳಿಕೆಯೊಂದು ನೀಡಿ ಮತ್ತೆ ಸುದ್ದಿಯಲ್ಲಿದ್ದಾರೆ.  


ಸಂದರ್ಶನವೊಂದರಲ್ಲಿ ಮಾತನಾಡಿದ ತನುಶ್ರೀ ದತ್ತಾ, ‘ಚಾಕೋಲೇಟ್’, ‘ಡೀಪ್ ಡಾರ್ಕ್ ಸಿಕ್ರೇಟ್’ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ಆರೋಪ ಮಾಡಿದ್ದಾರೆ. ಚಾಕೋಲೇಟ್ ಸಿನಿಮಾದ ಹಾಡೊಂದರ ಶೂಟಿಂಗ್ ನಲ್ಲಿ ಬಟ್ಟೆ ಬಿಚ್ಚಿ ನೃತ್ಯ ಮಾಡುವಂತೆ ವಿವೇಕ್  ತನುಶ್ರೀಗೆ ಹೇಳಿದ್ದರಂತೆ. ತನುಶ್ರೀ ಇರ್ಫಾನ್ ಜೊತೆ ಹಾಡೊಂದನ್ನು ಶೂಟ್ ಮಾಡುತ್ತಿದ್ದರಂತೆ. ಈ ದೃಶ್ಯಕ್ಕೆ ನನ್ನ ಅಗತ್ಯವಿರಲಿಲ್ಲ. ಆದ್ರೆ ಬಟ್ಟೆ ಬಿಚ್ಚಿ ಡಾನ್ಸ್ ಮಾಡುವಂತೆ ವಿವೇಕ್ ಹೇಳಿದ್ದರು ಎಂದು ತನುಶ್ರೀ ಆರೋಪಿಸಿದ್ದಾರೆ.


ಈ ವೇಳೆ ಸುನೀಲ್ ಶೆಟ್ಟಿ ಕೂಡ ಅಲ್ಲಿದ್ದರಂತೆ. ವಿವೇಕ್  ಅಗ್ನಿಹೋತ್ರಿ ಬಟ್ಟೆ ಬಿಚ್ಚುವಂತೆ ಹೇಳಿದಾಗ ತನುಶ್ರೀ ಅದನ್ನು ವಿರೋಧಿಸಿದ್ದಳಂತೆ. ತನುಶ್ರೀಗೆ ಸುನೀಲ್ ಶೆಟ್ಟಿ ಹಾಗೂ ಇರ್ಫಾನ್ ಬೆಂಬಲ ನೀಡಿದ್ದರಂತೆ. ‘ನನಗೆ ನಟನೆ ಗೊತ್ತು, ಯಾವುದೇ ಸೂಚನೆಗಳ ಅಗತ್ಯವಿಲ್ಲ’ ಎಂದು ಇರ್ಫಾನ್  ನಿರ್ದೇಶಕರಿಗೆ ಹೇಳಿದ್ದಾರಂತೆ.


ನಟಿ ತನುಶ್ರೀ ದತ್ತಾ ಬತ್ತಳಿಕೆಯಲ್ಲಿ ಇನ್ನು ಯಾರ ಯಾರ ಹೆಸರಿದೆಯೋ ಕಾದು ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

10 ನಿಮಿಷದ ನೃತ್ಯ ಪ್ರದರ್ಶನಕ್ಕೆ ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ?