Select Your Language

Notifications

webdunia
webdunia
webdunia
webdunia

TE3N ಟ್ರೇಲರ್ ಎರಡೇ ದಿನದಲ್ಲಿ 2 ಮಿಲಿಯನ್ ವೀಕ್ಷಣೆ

TE3N trailer
ಮುಂಬೈ , ಸೋಮವಾರ, 9 ಮೇ 2016 (10:11 IST)
ಬಾಲಿವುಡ್ ಬಾದ್ ಷಾ ಅಮಿತಾಬ್ ಬಚ್ಚನ್ ರ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾTE3N . ಅಮಿತಾಬ್ ಸಿನಿಮಾ ಅಂದ್ರೆ ಬಾಲಿವುಡ್ ನಲ್ಲಿ ಸಾಕಷ್ಟು ನಿರೀಕ್ಷೆಗಳಿರುತ್ತೆ. ಚಿತ್ರ ಈಗಾಗ್ಲೇ ರಿಲೀಸ್ ಹಂತಕ್ಕೆ ಬಂದಿದೆ.

TE3N ಚಿತ್ರದ ಟ್ರೈಲರ್ ರಿಲೀಸ್ ಆಗಿ ಎರಡು ದಿನ ಕಳೆದಿದೆ ಅಷ್ಟರಲ್ಲಿ 2ಮಿಲಿಯನ್ ಜನ ಟ್ರೈಲರ್ ಅನ್ನ ವೀಕ್ಷಿಸಿ ದಾಖಲೆ ಬರೆದಿದ್ದಾರೆ. ಯೂಟೂಬ್ ನಲ್ಲಿ ಅಪ್ ಲೋಡ್ ಆಗಿ ಎರಡು ದಿನಗಳಲ್ಲಿ 2ಮಿಲಿಯನ್ ಜನ ಈ ಸಿನಿಮಾದ ಟ್ರೈವರ್ ನೋಡಿದ್ದಾರೆ. 
 
ಲ್ಲದೆ ಬಾಲಿವುಡ್ ನಲ್ಲಿ ಇದೊಂದು ದಾಖಲೆಯೂ ಆಗಿದೆ.ರಿಬು ದಾಸ್ ಗುಪ್ತಾ ನಿರ್ದೇಶದ ಥ್ರಿಲ್ಲರ್ ಚಿತ್ರ ಟೀನ್. ಕೋರಿಯನ್ ಥ್ರಿಲ್ಲರ್ ಮೂವಿ ಮಾಂಟೇಜ್ ಸಿನಿಮಾದ ರಿಮೇಕ್ ಆಗಿರೋ ಈ ಸಿನಿಮಾ ಸಾಕಷ್ಟು ಕಾರಣಗಳಿಂದಾಗಿ ಬಾಲಿವುಡ್ ನಲ್ಲಿ ನಿರೀಕ್ಷೆಗಳನ್ನ ಹುಟ್ಟು ಹಾಕಿದೆ. ಅಮಿತಾಬ್ ಬಚ್ಚನ್, ನವಾಜುದ್ದೀನ್ ಸಿದ್ದಿಕಿ, ವಿದ್ಯಾಬಾಲನ್ ಮೇನ್ ರೋಲ್ ನಲ್ಲಿ ಕಾಣಿಸಿಕೊಂಡಿರೋ ಸಿನಿಮಾ ಇದೇ ಜೂನ್ 10ಕ್ಕೆ ರಿಲೀಸ್ ಆಗಲಿದೆ. 
 
ಮೊಮ್ಮಗಳು ಏಂಜೆಲ್  ಕಾಣೆಯಾದಾಗ ಆಕೆಯನ್ನ ಹುಡುಕಿ ಅಜ್ಜ ಬಿಗ್ ಬಿ ಹೊರಡೋ ರೋಚಕ ಕಥೆಯೇ ಟೀನ್. ಈ ಚಿತ್ರದಲ್ಲಿ ವಿದ್ಯಾಬಾಲನ್ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗ್ಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರೋTE3N ಚಿತ್ರವನ್ನ ನೋಡೋದಕ್ಕೆ ಜೂನ್ 10ರವರೆಗೆ ಕಾಯಲೇ ಬೇಕು. ಅಲ್ಲಿವರೆಗೂ ಟ್ರೈಲರ್ ನೋಡಿ ಥ್ರಿಲ್ ಆಗ್ಬೇಕು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ಆಸೆಗಳನ್ನ ಪೂರೈಸೋದನ್ನ ಪ್ರೀತಿಸ್ತೀನಿ- ಶಾರೂಖ್