Select Your Language

Notifications

webdunia
webdunia
webdunia
webdunia

ಮಕ್ಕಳ ಆಸೆಗಳನ್ನ ಪೂರೈಸೋದನ್ನ ಪ್ರೀತಿಸ್ತೀನಿ- ಶಾರೂಖ್

Shah Rukh Khan
ಮುಂಬೈ , ಸೋಮವಾರ, 9 ಮೇ 2016 (10:09 IST)
ಬಾಲಿವುಡ್ ಸಕ್ಸಸ್ ಫುಲ್ ಸ್ಟಾರ್ ಶಾರುಖ್ ಖಾನ್. ಚಿತ್ರರಂಗದಿಂದಾಗಿಯೇ ಸಾಕಷ್ಟು ಹಣ ಮಾಡಿ ಜೊತೆಗೆ ಯಶಸ್ವಿ  ಉದ್ಯಮಿ ಕೂಡಾ ಆಗಿದ್ದಾರೆ. ಆದ್ರೆ ಸೂಪರ್ ಸ್ಟಾರ್ ಶಾರುಖ್‌ಗೆ ಯಾವುದೇ ಆಸೆ ಆಕಾಂಕ್ಷೆಗಳಿಲ್ವಂತೆ. 
ತನ್ನೆಲ್ಲಾ ಸಮಯ ಮತ್ತು ಹಣವನ್ನ ಮಕ್ಕಳ ಆಸೆಗಳನ್ನ ಈಡೇರಿಸೋದಕ್ಕೆ ಮೀಸಲಿಟ್ಟಿದ್ದೀನಿ ಅಂದಿದ್ದಾರೆ. ಸೂಪರ್ ಸ್ಟಾರ್ ನ ಜವಾಬ್ದಾರಿಯ ಜೊತೆಗೆ ಅಪ್ಪನ ಜವಾಬ್ದಾರಿಯೂ ಇರೋದ್ರಿಂದ ಶಾರುಖ್ ಮಕ್ಕಳ ಅಭಿಲಾಷೆಯನ್ನ ಪೂರೈಸೋದೆ ನನ್ನ ಕರ್ತವ್ಯ ಅಂದಿದ್ದಾರೆ.
 
ಮಿಡಲ್ ಕ್ಲಾಸ್ ಫ್ಯಾಮಿಲಿಯಿಂದ ಬಂದ ಶಾರುಖ್ ಇವತ್ತು ಕೋಟಿಗಳ ಲೆಕ್ಕವಿಲ್ಲದ್ದಷ್ಟು ಶ್ರೀಮಂತ. ಶಾರುಖ್ ಸಾಮ್ರಾಜ್ಯ ಭಾರತದಲ್ಲಿ ಅಷ್ಟೇ ಅಲ್ಲದೆ ವಿದೇಶಗಳಲ್ಲೂ ಹಬ್ಬಿದೆ. ಇವತ್ತಿಗೂ ಶಾರುಖ್ ರೆಸ್ಟೋರೆಂಟ್ ಹೋಗಿ ಊಟ ಮಾಡದೆ ಮನೆಗೆ ಹೋಗಿ ಊಟ ಮಾಡ್ತಾರೆ. 
 
ತಮ್ಮ ಫ್ಯಾಮಿಲಿಗೆ ಟೈಂ ಕೊಡುವ ಸಲುವಾಗಿ ಶಾರುಖ್ ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ  ಸಾಕಷ್ಟು ಟೈಂ ಅನ್ನ ಮೀಸಲಿಟ್ಟಿದ್ದಾರೆ. ಅಲ್ಲದೆ ತಮ್ಮ ಸ್ವಂತಕ್ಕೆ ಅಂತ ಏನನ್ನೂ ಖರೀದಿ ಮಾಡದ ಶಾರುಖ್ ಫ್ಯಾಮಿಲಿ ಮತ್ತು ಮಕ್ಕಳಿಗಾಗಿ ಶಾಪಿಂಗ್ ಮಾಡ್ತಾರೆ.
 
ಖಾನ್ ಗೆ ಬೇಕಾದ ಬಟ್ಟೆಬರೆ, ಶೂಗಳೆಲ್ಲವೂ ಶೂಟಿಂಗ್ ನಲ್ಲಿಯೇ ಸಿಗುತ್ತೆ. ಹೀಗಾಗಿ ಪ್ರತ್ಯೇಕವಾಗಿ ತನಗೆ ಅಂತ ಏನನ್ನ ಖರೀದಿ ಮಾಡೋದಿಲ್ಲ. ಆದ್ರೆ ಮಕ್ಕಳಿಗಾಗಿ ಮಕ್ಕಳ ಆಸೆಗಳನ್ನ ಈಡೇರಿಸೋದಕ್ಕಾಗಿ ಪ್ರಯತ್ನಿಸ್ತೀನಿ. ನನ್ನದೇ ಆದ ಬೇಡಿಕೆಗಳೇನಿಲ್ಲ ಅಂತ ಕಿಂಗ್ ಖಾನ್ ತಾನೊಬ್ಬ ಜವಾಬ್ದಾರಿಯುತ ತಂದೆ ಅನ್ನೋದನ್ನ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಸನ್ನಿ ಹೊಸ ಫೋಟೋ ಶೂಟ್..!