Select Your Language

Notifications

webdunia
webdunia
webdunia
webdunia

ಚಿತ್ರಗಳಲ್ಲಿ ಬ್ಯೂಸಿಯಾಗಿರುವ ನಟಿ ಸ್ವರಾ ಭಾಸ್ಕರ್

Swara Bhaskar
ಮುಂಬೈ , ಸೋಮವಾರ, 27 ಜೂನ್ 2016 (18:42 IST)
'ನಿಲ್ ಬಂಟಿ ಸಾಂಟಾ' ಚಿತ್ರ ನೋಡಿದವರು ಸ್ವರಾ ಭಾಸ್ಕರ್ ಯಾರು ಅಂತ ಗೊತ್ತಾಗುತ್ತೆ.. ಈ ಚಿತ್ರದಲ್ಲಿ ಸ್ವರಾ ಭಾಸ್ಕರ್ ಅಮೋಘ ಅಭಿನಯ ತೋರಿದ್ದಾರೆ ಎಲ್ಲರನ್ನು ರಂಜಿಸಿದ್ದರು. ಅದಾದ ಬಳಿಕ ಬ್ರೇಕ್ ತೆಗೆದುಕೊಂಡಿದ್ದ ಸ್ವರಾ ಬಾಸ್ಕರ್, ಇದೀಗ ತಮ್ಮ ಮುಂಬರುವ ಚಿತ್ರದ ಡಬ್ಬಿಂಗ್‌ನಲ್ಲಿ ಬ್ಯೂಸಿಯಾಗಿದ್ದಾಳಂತೆ. ಇತ್ತೀಚೆಗೆ ಸ್ವರಾ ಹೊಸ ಚಿತ್ರಕ್ಕಾಗಿ ಸಹಿ ಹಾಕಿದ್ದಾಳೆ. ಈ ಚಿತ್ರದಲ್ಲಿ ಕರೀನಾ ಕಪೂರ್ ಹಾಗೂ ಸೋನಮ್ ಕಪೂರ್ ನಟಿಸುತ್ತಿದ್ದಾರೆ.

ಇದಕ್ಕಿಂತ ಮೊದಲು ಆಕೆ ಮತ್ತೊಂದು ಚಿತ್ರದಲ್ಲಿ ಬ್ಯೂಸಿಯಾಗಿದ್ದಾಳೆ. ಹಿಮಾಚಲ ಪ್ರದೇಶದಲ್ಲಿ ಸೊಲೊದಲ್ಲಿ ಬ್ಯೂಸಿಯಾಗಿದ್ದಾಳೆ. ಅಲ್ಲದೇ ಸ್ವರಾಗೆ ಟ್ರಾವೆಲಿಗ್ ಅಂದ್ರೆ ತುಂಬಾ ಇಷ್ಟವಂತೆ.

ಈ ಹಿಂದೆ ಸೊಲೊ ಟ್ರಿಪ್‌ ತುರ್ಕಿ, ಸಿರಿಯಾ, ಪ್ಯಾಲೇಸ್ತೇನಿಯಾಗಾಗಿ ತೆರಳಿದ್ದರು. ನನಗೆ ಬ್ರೇಕ್ ಬೇಕು. ಅದಕ್ಕಾಗಿ ಹಿಮಾಚಲ ಪ್ರದೇಶದಲ್ಲಿ ಪರ್ವತಗಳ ಮಧ್ಯೆ ಇರುವುದು ಇಷ್ಟ ಎಂದಿದ್ದಾಳೆ ಈಕೆ.ಅನುಭವ ನನಗೆ ಸಾಕಷ್ಟು ಕಲಿಸಿದೆ ಎಂದ ಆಕೆ.. ದೈಹಿಕವಾಗಿ ಚಾಲೆಂಜಿಗ್ ಆಗಿದ್ದೇನೆ. ನನಗೆ ತುಂಬಾ ಜನ ಸ್ನೇಹಿತರಿದ್ದಾರೆ ಎಂದು ಸ್ವರಾ ಭಾಸ್ಕರ್ ತಿಳಿಸಿದ್ದಾಳೆ.

ಶಿಕ್ಷಣ ವ್ಯವಸ್ಥೆ ಹಾಗೂ ಸಮಾಜದ ಬಗ್ಗೆ ಚಿತ್ರದಲ್ಲಿ ಬಿಂಬಿಸಲಾಗಿದೆ. ಇನ್ನೂ ಚಿತ್ರ ನಿರ್ದೇಶನ ಮಾಡಿದ್ದಾರೆ.
ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಸ್ಕ್ರಿಪ್ಟ್ ರೈಟರ್ ಹಿಮಾಂಶು ಶರ್ಮಾ ಜತೆಗೆ ಡೇಟಿಂಗ್‌ನಲ್ಲಿ ನಡೆಸುತ್ತಿದ್ದಾರೆ ಎಂದು ಹೇಳಲಾಗ್ತಿತ್ತು. ಹಿಮಾಂಶು ಶರ್ಮಾ ತನು ವೆಡ್ಸ್ ಮನು  ಚಿತ್ರದಿಂದ ಖ್ಯಾತಿ ಪಡೆದಿದ್ದರು.

ಇದೀಗ ಈ ಕಪಲ್‌ಗಳು 2 ವರ್ಷದಿಂದ ಡೇಟಿಂಗ್ ನಡೆಸುತ್ತಿದ್ದಾರೆ. ಚಿತ್ರದ ವೇಳೆ ಇಬ್ಬರು ಆತ್ಮೀಯರಾಗಿದ್ದಾರಂತೆ. ಸದ್ಯಕ್ಕೆ ನಾವಿಬ್ಬರು ನಮ್ಮ ಕೆರಿಯರ್ ಬಗ್ಗೆ ಹೆಚ್ಚು ಗಮನ ಹರಿಸಿದ್ದೇವೆ. ಆದ್ದರಿಂದ ಸದ್ಯದಲ್ಲಿ ನಾವಿಬ್ಬರು ಮದುವೆ ಬಗ್ಗೆ ಯೋಚನೆ ಮಾಡಿಲ್ಲ' ಎಂದು ಸ್ವರಾ ತಿಳಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ನೋ ಸ್ಮೋಂಕಿಗ್‌' ಚಿತ್ರದಲ್ಲಿ ವಿವೇಕ್ ಒಬೆರಾಯ್