Select Your Language

Notifications

webdunia
webdunia
webdunia
webdunia

ನೋ ಸ್ಮೋಂಕಿಗ್‌' ಚಿತ್ರದಲ್ಲಿ ವಿವೇಕ್ ಒಬೆರಾಯ್

Vivek Oberoi No Smoking
ದೆಹಲಿ , ಸೋಮವಾರ, 27 ಜೂನ್ 2016 (18:14 IST)
ಬಾಲಿವುಡ್ ನಟ ವಿವೇಕ್ ಒಬೆರಾಯ್ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದು ಕಮರ್ಶಿಯಲ್ ಚಿತ್ರ ಎಂದು ಹೇಳಲಾಗ್ತಿದ್ದು, ಸ್ಮೋಕಿಂಗ್ ಬಗ್ಗೆ ಅರಿವು ಮೂಡಿಸುವ ಸಂಬಂಧ ಈ ಚಿತ್ರ ಮೂಡಿ ಬರಲಿದೆ. ಇನ್ನೂ ವಿಶೇಷ ಎಂದ್ರೆ ನೋ ಸ್ಮೋಕಿಂಗ್ ಚಿತ್ರದಲ್ಲಿ ವಿವೇಕ್ ಒಬೆರಾಯ್ ಅವರೇ ನಿರ್ದೇಶನ ಮಾಡುತ್ತಿದ್ದು, ಅವರೇ ನಟನೆ ಮಾಡುತ್ತಿದ್ದಾರೆ.

ಇನ್ನೂ ಈ ಚಿತ್ರ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರಂನಲ್ಲಿ ಚಿತ್ರ ರಿಲೀಸ್ ಆಗಲಿದೆ..ಇನ್ನೂ ಎಲ್ಲಾ ಚಿತ್ರಮಂದಿರಗಳಲ್ಲೂ ಚಿತ್ರ ಬಿಡುಗಡೆ ಬಗ್ಗೆ ಆಶಯ ವ್ಯಕ್ತಪಡಿಸಿದ್ದಾರೆ ವಿವೇಕ್ ಒಬೆರಾಯ್. 
 
ಬಹಳ ವರ್ಷದಿಂದ ನಾನು ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಕೆಲಸ ಮಾಡುತ್ತಿದ್ದೇನೆ. ಸಿಪಿಎಎ ಜತೆಗೆ ಕೆಲಸ ಮಾಡುತ್ತಿದ್ದೇನೆ. ಅಲ್ಲದೇ ತಂಬಾಕು ಹಾಗೂ ಸಿಗರೇಟ್ ಕುರಿತು ಅರಿವು ಮೂಡಿಸುವಲ್ಲಿ ಮುಂದಾಗಿದ್ದಾರೆ ವಿವೇಕ್ ಒಬೆರಾಯ್..

ಈ ಹಿಂದೆ ವಿವೇಕ್ ಒಬೆರಾಯ್ ಸಲ್ಮಾನ್ ಖಾನ್ ಅಭಿನಯದ ಸುಲ್ತಾನ್ ಚಿತ್ರವನ್ನು ಅದ್ಫುತ್ ಎಂದು ಹೇಳಿದ್ದರು.. ಎಲ್ಲಾ ಸ್ಟಾರ್‌ಗಳನ್ನು ಒಂದೇ ಕಡೆ ನೋಡುವ ಭಾಗ್ಯ ದೊರೆತಿದ್ದು, ವಿಭಿನ್ನ ಪಾತ್ರಗಳಲ್ಲಿ ನಟಿಸುವುದು ಖುಷಿ ಎನ್ನಿಸುತ್ತದೆ. ಸುಲ್ತಾನ ಚಿತ್ರ ನೋಡಲು ಗ್ರೇಟ್ ಎಂದು ತಿಳಿಸಿದ್ದರು ವಿವೇಕ್
 
ಇನ್ನೂ ವಿವೇಕ್ ಒಬೆರಾಯ್ ಯಶ್ ರಾಜ್ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಬ್ಯಾಂಕ್‌ಚೋರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸತ್ಯಾ ಚಿತ್ರದಲ್ಲಿ ರಾಣಿ ಮುಖರ್ಜಿ ಜತೆಗೆ ನಟಿಸಿದ್ದ ಅವರಿಗೆ ಬಿಗ್ ಹಿಟ್ ದೊರಕಿಸಿಕೊಟ್ಟಿತ್ತು. ಅದೇ ಬ್ಯಾನರ್ ನಲ್ಲಿ ಈ ಚಿತ್ರ ಮೂಡಿ ಬರುತ್ತಿರುವುದು ವಿಶೇಷ.. ಇನ್ನೂ ಗ್ರೇಟ್ ಗ್ರ್ಯಾಂಡ್ ಮಸ್ತಿ ಚಿತ್ರದಲ್ಲಿ ವಿವೇಕ ನಟಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಬಾಲ್ಯದ ಫೊಟೋ ಶೇರ್ ಮಾಡಿದ ಅಮಿರ್ ಖಾನ್