ಸಲ್ಮಾನ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ... ಅನುಶ್ಕಾ ಶರ್ಮಾ ಹಾಗೂ ಸಲ್ಮಾನ್ ಖಾನ್ ಅಭಿನಯದ 'ಸುಲ್ತಾನ' ಚಿತ್ರ ಒಂದೇ ಒಂದು ಸಿಂಗಲ್ ಕಟ್ ಇಲ್ಲದೇ ರಿಲೀಸ್ ಆಗುತ್ತಿದೆ. ಸಿಬಿಎಫ್‌ಸಿ ಚಿತ್ರವನ್ನು ವೀಕ್ಷಿಸಿದೆಯಂತೆ. ಸೆನ್ಸಾರ್ ಮಂಡಳಿಗೆ ಚಿತ್ರ ಇಷ್ಟವಾಗಿದೆ ಎಂದು ಹೇಳಲಾಗ್ತಿದೆ.
ಆದ್ದರಿಂದ ಸುಲ್ತಾನ್ ಚಿತ್ರಕ್ಕೆ ಒಂದೇ ಒಂದು ಸಿಂಗಲ್ ಕಟ್ ಮಾಡಲಾಗುತ್ತಿಲ್ಲ. ಹೀಗಾಗಿ ಎಲ್ಲಾ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಈ ಸುದ್ದಿ ಕೇಳಿ ಖುಷಿ ಪಡಬಹುದು.
ಈದ್ ಹಬ್ಬದಂದು ಚಿತ್ರ ರಿಲೀಸ್ ಆಗುತ್ತಿದೆ. ಸಲ್ಮಾನ್ ಸುಲ್ತಾನ್ ಚಿತ್ರ ಬಿಡುಗಡೆಗಾಗಿ ತುಂಬಾ ಎಕ್ಸೈಟ್ ಆಗಿದ್ದಾರೆ. ಇನ್ನೂ ಸುಲ್ತಾನ್ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿತ್ತು. ಅಭಿಮಾನಿಗಳಲ್ಲಿ ಚಿತ್ರದ ಸಾಂಗ್ ಕುರಿತು ನಿರೀಕ್ಷೆ ಹೆಚ್ಚಿದೆ. ಚಿತ್ರದ ಸಾಂಗ್ ನೋಡಿದ್ರೆ ಸಲ್ಮಾನ್ ಹಾಗೂ ಅನುಷ್ಕಾ ಶರ್ಮಾರ ಡ್ಯಾನ್ಸಿಂಗ್ ಸ್ಕಿಲ್ಸ್ ಅದ್ಭುತವಾಗಿ ಮೂಡಿ ಬಂದಿದೆ.
ಅಲ್ಲದೇ ಸಾಂಗ್ ಕಂಪೋಸ್ ಮಾಡಿದ್ದಾರೆ ವಿಶಾಲ್ ದಾದಲಾನಿ ಹಾಗೂ ಶೇಖರ್ ರವಿಜಾನಿ.. ಸುಲ್ತಾನ್ ಚಿತ್ರದ ಈ ಹಾಡು ಕೇಳುಗರನ್ನು ಮೋಡಿ ಮಾಡುವುದಂತು ಸುಳ್ಳಲ್ಲ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ