ಬಾಲಿವುಡ್ ಬಾದ್ ಶಾ 24 ವರ್ಷಗಳನ್ನು ಪೊರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಸೆಲೆಬ್ರೆಟ್ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ.
ಅಲ್ಲದೇ ಸೋಷಿಯಲ್ ಮೀಡಿಯಾಗಳಲ್ಲಿ ಎಸ್‌ಆರ್‌ಕೆ ಆ್ಯಕ್ಟಿವ್ ಆಗಿದ್ದಾರೆ.
ಇನ್ನೂ ಶಾರೂಖ್ ಅವರ ಅಭಿಮಾನಿಯೊಬ್ಬ ಎಸ್‌ಆರ್‌ಕೆ ಸೂಪರ್ ಹಿರೋ ಅಂತ ಸಾಬೀತು ಪಡಿಸಿದ್ದಾರೆ. ಹಿರೋ, ಲವರ್ ಆನ್ ಸ್ಕ್ರೀನ್, 24 ಗೋಲ್ಡನ್ ಇಯರ್ಸ್ ಆಫ್ ಕಿಂಗ್ ಖಾನ್ ಅಂತ ಟ್ವಿಟರ್ ಮೂಲಕ ಶುಭಾಷಯ ತಿಳಿಸಿದ್ದಾರೆ.
ಅಲ್ಲದೇ ಇದೇ ವೇಳೆ ಮತ್ತೊಬ್ಬ ಅಭಿಮಾನಿ ಯಿಂದ ಶುಭಾಷಯ ತಿಳಿಸಿದ್ದಾರೆ. ಥ್ಯಾಂಕು ಫಾರ್ 24 ಇಯರ್ಸ್ ಆಫ್ ಕಿಂಗ್ ಖಾನ್ ಎಂದು ಟ್ವೀಟ್ ಮಾಡಿದ್ದಾರೆ. 50 ವರ್ಷದ ಶಾರೂಖ್ ಖಾನ್ ಚಿತ್ರರಂಗದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕುಛ್ ಕುಛ್ ಹೋತಾ ಹೇ, ದಿಲ್‌ವಾಲೇ ದುಲ್ಹನೀಯಾ ಲೇ ಜಾಯೇಗೇ, ಬಾಜೀಗರ್, ಚೆನ್ನೈ ಎಕ್ಸ್‌ಪ್ರೆಸ್ ಮುಂತಾದವುಗಳಲ್ಲಿ ಅತ್ಯುತ್ತಮ ಅಭಿನಯ ತೋರಿದ್ದಾರೆ ಎಸ್‌ಆರ್‌ಕೆ.
ಶಾರೂಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ರಾಯಿಸ್ ಜನೆವರಿ 26, 2017ಕ್ಕೆ ರಿಲೀಸ್ ಆಗಲಿದೆ.. ಈ ಬಗ್ಗೆ ಚಿತ್ರದ ನಿರ್ಮಾಪಕರು ಮಾಹಿತಿ ನೀಡಿದ್ದಾರೆ. ಶಾರೂಖ್ ಅಭಿನಯದ ರಾಯಿಸ್ ಚಿತ್ರ ಎಲ್ಲರ ದೃಷ್ಟಿ ನಾಟುವಂತೆ ಮಾಡಿದೆ... ಟೀಸರ್‌ನ ವಿಡಿಯೋದಲ್ಲಿ ಹ್ಯಾಂಡ್‌ಸಮ್ ಶಾರೂಖ್ ಖಾನ್ ಆಲ್ಕೋಹಾಲ್ ಪಡೆದುಕೊಳ್ಳುತ್ತಿರುವ ದೃಶ್ಯ ಅವರ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ...
2016ರಲ್ಲಿ ಶಾರೂಖ್ ಖಾನ್ ಅವರ ರಾಯಿಸ್ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾ. ಈ ಸಿನಿಮಾದ ಬಗ್ಗೆ ಹಲವರು ಮಾತಾಡಿಕೊಳ್ಳುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ