ಕನ್ನಡದ ಬಂಧನ ಸಿನಿಮಾ ನೋಡಿದ ಯಾವೊಬ್ಬ ಪ್ರೇಕ್ಷಕನೂ ಕೂಡ ಸಿನಿಮಾದಲ್ಲಿನ ಜೈಜಗದೀಶ್ ಹಾಗ ಸುಹಾಸಿನಿ ಜೋಡಿಯನ್ನು ಮರೆಯೋದಕ್ಕೆ ಸಾಧ್ಯಾನೇ ಇಲ್ಲ. ಅಷ್ಟೊಂದು ಸುಂದರವಾಗಿ ಅಭಿನಯಿಸಿದ್ದರು, ಸುಹಾಸಿನಿ ಹಾಗೂ ಜೈಜಗದೀಶ್. ಇದೀಗ ಇದೇ ಜೋಡಿಯನ್ನು ಮತ್ತೆ ತೆರೆ ಮೇಲೆ ನೋಡುವ ಅವಕಾಶ ಮತ್ತೊಮ್ಮೆ ಒದಗಿ ಬಂದಿದೆ.
ಅಂದ್ಹಾಗೆ ಸುಹಾಸಿನಿ ಹಾಗೂ ಜೈಜಗದೀಶ್ ಕನ್ನಡ ಸಿನಿಮಾದಲ್ಲಿ ಜೊತೆಯಾಗಿ ಅಭಿನಯಿಸುತ್ತಿದ್ದಾರಾ ಅಂತಾ ನೀವೇನಾದ್ರೂ ಯೋಚಿಸುತ್ತಿದ್ದೀರಾ. ಇಲ್ಲ ಇವರಿಬ್ಬರು ಜೊತೆಯಾಗಿ ಅಭಿನಯಿಸುತ್ತಿರೋದು ನಾನಿ ಸಿನಿಮಾದಲ್ಲಿ . ಗುಜರಾತ್ ನಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾ ಇದಾಗಿದ್ದು ಈ ಸಿನಿಮಾದಲ್ಲಿ ಸುಹಾಸಿನಿ ಹಾಗೂ ಜೈಜಗದೀಶ್ ಅವರು ಬಾಲಕಿಯೊಬ್ಬಳ ತಂದೆ ತಾಯಿಯಾಗಿ ಅಭಿನಯಿಸಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ.
ಅಂದ್ಹಾಗೆ ಈಗಗಾಲೇ ನಾನಿ ಸಿನಿಮಾ ಟ್ರೇಲರ್ ನೋಡಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ. ಅಲ್ಲದೇ ಇದೊಂದು ಉತ್ತಮ ಸಿನಿಮಾ ಅಂತಾ ಕೊಂಡಾಡಿದ್ದಾರಂತೆ.
ಬಹು ವರ್ಷಗಳ ನಂತರ ಸುಹಾಸಿನಿ ಹಾಗೂ ಜೈಜಗದೀಶ್ ಅವರು ಜೊತೆಯಾಗಿ ನಟಿಸುತ್ತಿರೋದರಿಂದ ಅಭಿಮಾನಿಗಳು ಈ ಜೋಡಿಯನ್ನು ಕಣ್ತುಂಬಿಕೊಳ್ಳೋಕೆ ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಇದೊಂದು ವಿಭಿನ್ನ ಕಥಾಹಂದರವಿರುವ ಸಿನಿಮಾವಾಗಿರೋದರಿಂದ ಸಿನಿಮಾದ ಬಗ್ಗೆ ಸ್ಯಾಂಡಲ್ ವುಡ್ ಹಾಗೇ ಟಾಲಿವುಡ್ ನಲ್ಲೂ ಸಾಕಷ್ಟು ನಿರೀಕ್ಷೆಗಳಿವೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ