ನಟ ದರ್ಶನ್ ತೂಗುದೀಪ್ ಹಾಗೂ ಸೃಜನ್ ಲೊಕೇಶ್ ಅವರು ಎಷ್ಟು ಒಳ್ಳೆ ಸ್ನೇಹಿತರು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ದರ್ಶನ್ ಎಲ್ಲೇ ಟ್ರಿಪ್ ಹೋಗಲಿ ಪಾರ್ಟಿ ಮಾಡಲಿ ಅಲ್ಲಿ ಸೃಜನ್ ಅವರ ಸಾಥ್ ಇದ್ದೇ ಇರುತ್ತೆ. ಇನ್ನು ಮೊನ್ನೆ ರಿಲೀಸ್ ಆದ ಜಗ್ಗು ದಾದಾ ಸಿನಮಾದಲ್ಲೂ ಇವರಿಬ್ಬರು ಜೊತೆಯಾಗಿ ಅಭಿನಯಿಸಿದ್ದರು. ಇದೀಗ ಅವರ ಸ್ನೇಹ ಎಂತಹದ್ದು ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.
ದರ್ಶನ್ ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ ಬೇರೆ ಬೇರೆ ರೀತಿಯ ಪ್ರಾಣಿ ಪಕ್ಷಿಗಳನ್ನು ಸಾಕುತ್ತಿರೋ ವಿಚಾರ ನಿಮಗೆಲ್ಲಾ ಗೊತ್ತೇ ಇದೆ. ದರ್ಶನ್ ಆಗಾಗ್ಗೆ ವಿದೇಶಿ ಪಕ್ಷಿಗಳನ್ನು ಇಲ್ಲಾ ಇನ್ನ್ಯಾವುದೋ ಪ್ರಾಣಿಗಳನ್ನು ತಂದು ತಮ್ಮ ಫಾರ್ಮ್ ಹೌಸ್ ನಲ್ಲಿ ಸಲಹುತ್ತಾರೆ. ಇದೀಗ ದರ್ಶನ್ ಅವರ ತೋಟದ ಮನೆಯಲ್ಲಿರುವ ಎರಡು ಎತ್ತುಗಳಿಗೆ ನಾಮಕರಣ ಮಾಡಲಾಗಿದೆ.
ಏನಪ್ಪಾ ಅಂತಾ ಹೇಳಿದ್ರೆ ನೀವು ಅಚ್ಚರಿಗೆ ಒಳಗಾಗುತ್ತೀರಿ ದರ್ಶನ್ ತೋಟದ ಮನೆಯಲ್ಲಿರುವ ಎರಡು ಎತ್ತುಗಳಿಗೆ ಚಾಲೆಂಜಿಂಗ್ ಸ್ಟಾರ್ ಗಜ - ಟಾಕಿಂಗ್ ಸ್ಟಾರ್ ಸುಜ ಎಂದು ನಾಮಕರಣ ಮಾಡಲಾಗಿದೆ. ಎರಡೂ ಎತ್ತುಗಳು ಬಿಳಿ ಬಣ್ಣದಾಗಿದ್ದು ನೋಡೋದಕ್ಕೆ ಒಂದೇ ರೀತಿ ಇವೆ.
ಇನ್ನು ಈ ಎತ್ತುಗಳ ಫೋಟೋವನ್ನು ದರ್ಶನ್ ಅವರು ತಮ್ಮದೇ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ. ಈ ಎತ್ತುಗಳು ನೋಡದಕ್ಕೆ ತುಂಬಾನೇ ಮುದ್ದಾಗಿದ್ದು ಎರಡು ಎತ್ತುಗಳ ಎರಡು ಕಡೆಗಳಲ್ಲಿ ದರ್ಶನ್ ಹಾಗೂ ಸೃಜನ್ ಲೋಕೆಶ್ ಅವರು ನಿಂತುಕೊಂಡು ಪೋಸ್ ಕೊಟ್ಟಿದ್ದಾರೆ.ಇನ್ನು ಅಭಿಮಾನಿಗಳು ಕೂಡ ಫೋಟೋವನ್ನು ನೋಡಿ ಲೈಕ್ಸ್ ಹಾಗೂ ಕಾಮೆಂಟ್ ಗಳ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ