ವೋಗ್ ಕವರ್‌ ಪೇಜ್‌‌ನಲ್ಲಿ ಮಿಂಚಿದ ಸುಹಾನಾ ಖಾನ್!

Webdunia
ಶನಿವಾರ, 4 ಆಗಸ್ಟ್ 2018 (15:19 IST)
ಬಾಲಿವುಡ್ ಬಾದ್ ಶಾಹ್ ಶಾರೂಖ್ ಖಾನ್ ಅವರ ಮಗಳು ಸುಹಾನ ಖಾನ್ ಬಾಲಿವುಡ್‌ಗೆ ಎಂಟ್ರಿ ನೀಡುವ ಮುಂಚೇನೆ ವೋಗ್ ಫ್ಯಾಷನ್ ಮ್ಯಾಗಜೀನ್‌ ಕವರ್‌ ಪೇಜ್‌‌ನಲ್ಲಿ ತನ್ನ ಬೋಲ್ಡ್ ಆಟಿಟ್ಯೂಡ್ ಹಾಗೂ ಲುಕ್‌ನಿಂದ ಮಿಂಚಿದ್ದಾರೆ.
ವೋಗ್ ಇಂಡಿಯಾ ಆಗಸ್ಟ್ ಸಂಚಿಕೆಯ ಕವರ್‌ ಪೇಜ್‌‌ನಲ್ಲಿ ಸುಹಾನಾ ಖಾನ್ ಫೋಟೋ ಪ್ರಕಟವಾಗಿದ್ದು ಆಕೆಯ ಮೊದಲ ಸಂದರ್ಶನ ಕೂಡ ಪ್ರಕಟವಾಗಿದೆ. ವೋಗ್‌ನಲ್ಲಿ ಸುಹಾನಾ ಹಾಟ್ ಫೋಟೋ ನೋಡಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಟೀಕೆ ಮಾಡುತ್ತಿದ್ದಾರೆ.
 
ಸುಹಾನಾ ಯಾವಾಗ ಚಿತ್ರರಂಗಕ್ಕೆ ಬರ್ತಾಳೆಂಬುದು ಇನ್ನೂ ಬಹಿರಂಗವಾಗಿಲ್ಲ, ಆದ್ರೆ ಬಿಟೌನ್‌ನಲ್ಲಿ ಸದ್ಯ ಕರಣ್ ಜೋಹರ್ ಚಿತ್ರಕ್ಕೆ ಸುಹಾನಾ ಖಾನ್ ಪಾದಾರ್ಪಣೆ ಮಾಡಲಿದ್ದಾರೆ ಎಂದು ಸದ್ದು ಕೇಳಿಬರುತ್ತಿದೆ.
 
ನನ್ನ ಮಗಳನ್ನು ಮತ್ತೆ ನನ್ನ ಕೈಯಲ್ಲಿ ಎತ್ತಿಕೊಳ್ಳುತ್ತಿದ್ದೇನೆ, ಧನ್ಯವಾದಗಳು ವೋಗ್. ಮಕ್ಕಳ ವಿಷಯ ಬಂದಾಗ ಪೋಷಕರು ಬಹಳ ನಿರೀಕ್ಷೆಗಳನ್ನಿಟ್ಟುಕೊಳ್ಳುತ್ತಾರೆ. ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ. ಪ್ರೀತಿಯ ಅಪ್ಪುಗೆ ಸುಹಾನಾ ಖಾನ್ ಎಂದು ಮಗಳ ಫೋಟೋ ಇರುವ ವೋಗ್ ಮ್ಯಾಗಜೀನ್‌ ಅನ್ನು ಹಿಡಿದಿರುವ ಫೋಟೋವನ್ನು ಶಾರುಕ್ ಖಾನ್ ಮತ್ತು ಗೌರಿ ಖಾನ್ ತಮ್ಮ ಟ್ವಿಟರ್ ಹಾಗು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಚಾಪ್ಟರ್ 1 ಒಂದು ವಾರದಲ್ಲಿ ಗಳಿಸಿದ್ದು ಎಷ್ಟು

ಬಿಗ್ ಬಾಸ್ ರಾತ್ರೋ ರಾತ್ರಿ ತೆರೆಯಲು ಕಿಚ್ಚ ಸುದೀಪ್ ಕರೆ ಮಾಡಿದ್ದು ಯಾರಿಗೆ

ಅ‍ಪಘಾತದಲ್ಲಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿ ಪಂಜಾಬಿ ಗಾಯಕ ರಾಜವೀರ್ ಜವಾಂಡ ನಿಧನ

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್, ಆತನ ಮಗನ ವಿರುದ್ಧ 23 ಪ್ರಕರಣ, ಲುಕ್‌ ಔಟ್ ನೋಟಿಸ್ ಜಾರಿ

ದರ್ಶನ್ ಜೈಲು ಸೇರಿದ ಬೆನ್ನಲ್ಲೇ ಫಾರ್ಮ್ ಹೌಸ್ ನ ಕುದುರೆಗಳ ಮಾರಾಟ

ಮುಂದಿನ ಸುದ್ದಿ
Show comments