ಕಿಚ್ಚ ಸುದೀಪ್ ಅವರು ಸದ್ಯ ಮುಂಬೈನಲ್ಲಿ ಕೋಟಿಗೊಬ್ಬ-2 ಸಿನಿಮಾದ ಶೂಟಿಂಗ್ ನಲ್ಲಿ ಕಳೆದ ಕೆಲವು ದಿನಗಳಿಂದ ಬ್ಯುಸಿಯಾಗಿದ್ದರು.ಆದ್ರೆ ನಿನ್ನೆ ಇದ್ದಕ್ಕಿದ್ದಂತೆ ಸುದೀಪ್ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಅರೆ ಅಂತಹದ್ದೇನಿಯ್ತಾಪ್ಪ ಅಂತಾ ಯೋಚಿಸುತ್ತಿದ್ದೀರಾ ಸುದೀಪ್ ಬಂದಿರೋದು ಅವರ ಅಪ್ಪ ಅಮ್ಮನಿಗಾಗಿ.
ಸುದೀಪ್ ಅಪ್ಪ ಅಮ್ಮ ಇವತ್ತು ಅಂದ್ರೆ ಮೇ 6 ರಂದು ತಮ್ಮ 50ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಸುದೀಪ್ ಅಪ್ಪ ಅಮ್ಮನಿಗೆ ಅದು ಸ್ಪೆಷಲ್ ಡೇ. ಹಾಗಾಗಿ ಅದನ್ನು ವಿಭಿನ್ನವಾಗಿ ಆಚರಿಸಬೇಕು ಅಂತಾ ಪ್ಲಾನ್ ಮಾಡಿಕೊಂಡು ಸುದೀಪ್ ಅವರು ಬೆಂಗಳೂರಿಗೆ ಬಂದಿದ್ದಾರೆ.ಇನ್ನು ಅಪ್ಪ ಅಮ್ಮನಿಗಾಗಿ ಸುದೀಪ್ ಬೆಂಗಳೂರಿನ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ಪಾರ್ಟಿಯೊಂದನ್ನು ಕೂಡ ಹಮ್ಮಿಕೊಂಡಿದ್ದಾರಂತೆ.
ಹಾಗಾಗಿ ಸುದೀಪ್ ತಮ್ಮ ಕೆಲಸಕ್ಕೆ ಕೊಂಚ ಬ್ರೇಕ್ ಕೊಟ್ಟು ಸಿಲಿಕಾನ್ ಸಿಟಿಯತ್ತ ಮುಖ ಮಾಡಿದ್ದಾರೆ.ಕೋಟಿಗೊಬ್ಬ ಸಿನಿಮಾವನ್ನು ಗಜಕೇಸರಿ ಕೃಷ್ಣ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಸುದೀಪ್ ಅವರು ಆರ್ಮಿ ಆಫೀಸರ್ ಆಗಿ ಅಭಿನಯಿಸುತ್ತಿದ್ದಾರೆ. ಸದ್ಯ ಮುಂಬೈನಲ್ಲಿ ಸಾಂಗ್ ಶೂಟಿಂಗ್ ನಡೆಯುತ್ತಿದ್ದು, ಶೀಘ್ರದಲ್ಲೇ ಸಿನಿಮಾ ರಿಲೀಸ್ ಆಗಲಿದೆ.