Publish Date: Wed, 02 Aug 2017 (09:52 IST)
Updated Date: Wed, 02 Aug 2017 (09:54 IST)
ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಎಂದರೆ ಜೀವಕ್ಕಿಂತ ಹೆಚ್ಚು ಇಷ್ಟಪಡುವ ಅದೆಷ್ಟೋ ಅಭಿಮಾನಿಗಳಿದ್ದಾರೆ. ಆದರೆ ಮನುಷ್ಯರಲ್ಲದೆ ಪ್ರಾಣಿಗಳೂ ಶಾರುಖ್ ರನ್ನು ಇಷ್ಟಪಡುತ್ತವೆ ಎಂದರೆ ನೀವು ನಂಬಲೇ ಬೇಕು.
ಗೋರೆಗಾಂವ್ ನಲ್ಲಿರುವ ಫಿಲ್ಮ್ ಸಿಟಿಯಲ್ಲಿ ಹಿಂದಿ ಧಾರವಾಹಿ ಸೆಟ್ ನಲ್ಲಿ ಶಾರುಖ್ ತಮ್ಮ ಜಬ್ ಹ್ಯಾರಿ ಮೆಟ್ ಸುಜಾಲ್ ಚಿತ್ರದ ಪ್ರಮೋಷನ್ ಗಾಗಿ ಶೂಟಿಂಗ್ ನಲ್ಲಿ ತಲ್ಲೀನರಾಗಿದ್ದಾಗ ಈ ಘಟನೆ ನಡೆದಿದೆ. ಈ ಭಾಗದಲ್ಲಿ ಚಿರತೆ ಓಡಾಡುವುದು ಸಾಮಾನ್ಯ.
ಆದರೆ ಈ ಬಾರಿ ಚಿರತೆ ನೇರವಾಗಿ ಶಾರುಖ್ ಇದ್ದ ಜಾಗಕ್ಕೆ ಬರಲು ಹೊರಟಿತ್ತಂತೆ. ಆದರೆ ಅಷ್ಟರಲ್ಲಿ ಶಾರುಖ್ ಅಂಗರಕ್ಷಕರು ಈ ವಿಶೇಷ ಅಭಿಮಾನಿಯನ್ನು ಗಮನಿಸಿದ್ದಾರೆ. ಅಲ್ಲದೆ ಸೈಲಂಟಾಗಿ ತಮ್ಮ ಬಾಸ್ ನ್ನು ರಕ್ಷಿಸಿದ್ದಾರೆ. ಹಾಗಾಗಿ ಶಾರುಖ್ ಬಚವಾಗಿದ್ದಾರೆ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ