ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸು ಸಾಧಿಸುತ್ತಿರುವ 'ಸೋನು ಕೆ ಟಿಟು ಕಿ ಸ್ವೀಟೀ'

ನಾಗಶ್ರೀ ಭಟ್
ಬುಧವಾರ, 28 ಫೆಬ್ರವರಿ 2018 (16:21 IST)
ಪ್ಯಾರ್ ಕಾ ಪಂಚನಾಮಾ ಚಿತ್ರದ ನಿರ್ದೇಶಕ ಲವ್ ರಂಜನ್ ಅವರ ಇತ್ತೀಚಿನ ಚಿತ್ರ 'ಸೋನು ಕೆ ಟಿಟು ಕಿ ಸ್ವೀಟೀ' ತನ್ನ ಮೊದಲ ವಾರಾಂತ್ಯದಲ್ಲಿ ಅತ್ಯುತ್ತಮ ಗಳಿಕೆಯನ್ನು ಮಾಡಿ ಯಶಸ್ಸನ್ನು ಸಾಧಿಸಿದೆ. ಚಿತ್ರವು ಮೊದಲ ನಾಲ್ಕು ದಿನಗಳಲ್ಲಿ 31.74 ಕೋಟಿ ರೂಪಾಯಿಗಳನ್ನು ಗಳಿಸಿದೆ. ಈ ಚಿತ್ರದ ಥಿಯೇಟರ್‌ಗಳು ಹೌಸ್‌ಫುಲ್ ಆಗಿರುವುದು ಚಿತ್ರದ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ.
ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ್ ಅವರು ಚಿತ್ರದ ಗಳಿಕೆಯ ಕುರಿತ ವಿವರಗಳನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಮೊದಲ ವಾರದಲ್ಲಿ 'ಸೋನು ಕೆ ಟಿಟು ಕಿ ಸ್ವೀಟೀ' ಚಿತ್ರವು ಸುಮಾರು 44 ಕೋಟಿ ರೂಪಾಯಿಗಳನ್ನು ಗಳಿಸಿರುವುದಾಗಿ ಹೇಳಿದ್ದಾರೆ. ಶೀಘ್ರದಲ್ಲಿ ಈ ಚಿತ್ರದ ಗಳಿಕೆಯಲ್ಲಿ ಇಳಿತ ಕಾಣುವುದಿಲ್ಲ ಎನ್ನುವುದನ್ನೂ ಸಹ ಖಾತ್ರಿಪಡಿಸಿದ್ದಾರೆ. ಚಿತ್ರವು ಮೊದಲ ದಿನ 6.42 ಕೋಟಿ, ಎರಡನೇ ದಿನ ಶನಿವಾರ 9.34 ಕೋಟಿ, ಭಾನುವಾರ 10.81 ಕೋಟಿ, ಸೋಮವಾರ 5.17 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಚಿತ್ರವು 5 ಕ್ಕೆ 3.5 ರೇಟಿಂಗ್ ಅನ್ನು ಪಡೆದುಕೊಂಡಿದೆ.
 
'ಸೋನು ಕೆ ಟಿಟು ಕಿ ಸ್ವೀಟೀ' ಚಿತ್ರವು ಯಶಸ್ವಿ ತಂಡವಾದ ನುಶ್ರತ್ ಭರುಚ ಮತ್ತು ಕಾರ್ತಿಕ್ ಆರ್ಯನ್ ಅವರನ್ನು ಮೂರನೇ ಬಾರಿಗೆ ಒಟ್ಟಿಗೆ ಪರದೆಯ ಮೇಲೆ ತಂದಿದೆ. ಈ ಹಿಂದೆ ಅವರು 'ಪ್ಯಾರ್ ಕಾ ಪಂಚ್‌ನಾಮಾ 1' ಮತ್ತು 'ಪ್ಯಾರ್ ಕಾ ಪಂಚ್‌ನಾಮಾ 2' ಚಿತ್ರಗಳಲ್ಲಿ ಅಭಿನಯಿಸಿದ್ದು ಆ ಚಿತ್ರಗಳು ಯಶಸ್ಸನ್ನು ಕಂಡಿದ್ದವು. ಇವರೊಂದಿಗೆ ಸನ್ನಿ ನಿಜಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 'ಸೋನು ಕೆ ಟಿಟು ಕಿ ಸ್ವೀಟೀ' ಚಿತ್ರವು ಎರಡು ಬಾಲ್ಯ ಸ್ನೇಹಿತರ ಕುರಿತಾಗಿದೆ. ಅವರಲ್ಲಿ ಒಬ್ಬರು ಮದುವೆಯಾಗಲು ನಿರ್ಧರಿಸಿದಾಗ ಅವರಿಬ್ಬರ ನಡುವಿನ ಸಮೀಕರಣ ಬದಲಾಗುವುದನ್ನು ನಿರ್ದೇಶಕ ಲವ್ ರಂಜನ್ ಅವರು ಈ ಚಿತ್ರದಲ್ಲಿ ತುಂಬಾ ತಮಾಷೆಯಾಗಿ ವೀಕ್ಷಕರ ಮುಂದಿಡುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲು: ಇದು ಬೇರೆ ನಟರಿಗೂ ಅನ್ವಯಿಸುವ ವಿಚಾರ

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಏನೇನು ತಪ್ಪು ಮಾಡಿದ್ದಾರೆ: ನಾಳೆ ದಾಸನಿಗೆ ಮಹತ್ವದ ದಿನ

BB Season12: ಇನ್ನೂ ಆಟ ಶುರು ಮಾಡುತ್ತೇನೆಂದ ಮಲ್ಲಮ್ಮ, ದೊಡ್ಮನೆಯಿಂದ ಆಚೆ ಬಂದ್ರಾ

ಹಾಸಿಗೆ, ದಿಂಬು ಕೇಳಿದ್ದ ದರ್ಶನ್ ಗೆ ಕೋರ್ಟ್ ಕೊಟ್ಟಿದೆ ಮಹತ್ವದ ಆದೇಶ

ಕಾಂತಾರ ಚಾಪ್ಟರ್ 1 ಒಟಿಟಿಗೆ: ಬಂದದ್ದು ಸ್ವಲ್ಪ ಬೇಗ ಆಯ್ತಾ ಅಂತ ಅಂತಿದ್ದಾರೆ ಫ್ಯಾನ್ಸ್

ಮುಂದಿನ ಸುದ್ದಿ
Show comments