ಸೋನಮ್ ಕಪೂರ್ ಮುಂಬೈ ಚಲನಚಿತ್ರೋತ್ಸವಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಲಿದ್ದಾರೆ. ಜಿಯೋ ಮಾಮೀ 18ನೇ ಮುಂಬೈ ಫೆಸ್ಟಿವಲ್ ಹಾಗೂ ಸ್ಟಾರ್ ಇಂಡಿಯಾ ವರ್ಲ್ಡ್ ಟು ಸ್ಕ್ರೀನ್ ಮಾರ್ಕೆಟ್ ಕಾರ್ಯಕ್ರಮದ ಸೋನಮ್ ರಾಯಭಾರಿಯಾಗಲಿದ್ದಾರೆ ಎನ್ನಲಾಗುತ್ತಿದೆ.
ನಾನು ಈ ಬಗ್ಗೆ ಎಕ್ಸೈಟ್ ಆಗಿದ್ದೇನೆ. ಖುದ್ದು ನಾನೇ ಆಸಕ್ತಿಯಿಂದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ. ಇದೊಂದು ಉತ್ತಮವಾದ ಪ್ಲಾಟ್ ಫಾರಂ, ಮನರಂಜನೆ ಭರಿತವಾದದ್ದು ಎಂದು ಸೋನಮ್ ಹೇಳಿಕೊಂಡಿದ್ದಾರೆ.
ಈ ಹಿಂದೆ ದಿಪ್ಪಿ ಹಾಗೂ ಪಿಗ್ಗಿ ಹಾಲಿವುಡ್ ಲ್ಲಿ ತಮ್ಮ ಪಯಣ ಆರಂಭಿಸಿದ ವೇಳೆ ಸೋನಮ್ ಕಪೂರ್ ಅವರ ಬಳಿ ಮೇಡಮ್ ನೀವು ಹಾಲಿವುಡ್ ಕಡೆ ಪಯಣಿಸಲ್ವಾ ಅಂದಾಗ ಸದ್ಯ ಬಾಲಿವುಡ್ ನಲ್ಲೇ ಆರಾಮಾಗಿದ್ದೇನೆ ಇಲ್ಲಿ ಸಾಧಿಸೋದು ಬಹಳಷ್ಟಿದೆ ಅಂದಿದ್ದರು.
ಆದ್ರೀಗ ಸೋನು ಮೇಡಮ್ ಯಾಕೋ ಬೇರೇನೆ ಡೈಲಾಗ್ ಹೊಡಿತಿದ್ದಾರೆ.ನಾನು ರಷ್ಯನ್ , ಫ್ರೆಂಚ್ ಹಾಗೇ ಚೈನೀಸ್ ಸಿನಿಮಾಗಳಲ್ಲಿ ನಟಿಸುವಂತಹ ಅವಕಾಶ ಸಿಕ್ರೆ ಖಂಡಿತವಾಗಿಯೂ ಅಭಿನಯಿಸುತ್ತೇನೆ ಅಂತಾ ಸೋನಮ್ ಹೇಳಿದ್ದಾರೆ.ಆ ಸಿನಿಮಾಗಳ ಸ್ಕ್ರಿಫ್ಟ್ ತುಂಬಾನೇ ಚೆನ್ನಾಗಿರುತ್ತೆ. ಅಭಿನಯಕ್ಕೆ ಭಾಷೆ ಮುಖ್ಯವಲ್ಲ ಹಾಗಾಗಿ ಅವಕಾಶ ಸಿಕ್ರೆ ನಾನು ಅಭಿನಯಿಸೋಕೆ ರೆಡಿ ಎಂದು ಸೋನಮ್ ಹೇಳಿದ್ದರು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ