ಬಾಘೀ ಸಿನಿಮಾ ರಿಲೀಸ್ ಆಗಿದ್ದೇ ತಡ ಶ್ರದ್ಧಾ ಕಪೂರ್ ರು ಒಂದು ಚೂರು ವಿರಾಮವನ್ನು ಪಡೆದುಕೊಳ್ಳದೇ ಇದೀಗ ಮತ್ತೊಂದು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಮೊನ್ನೆ ಮೊನ್ನೆಯವರೆಗೂ ಬಾಘೀ ಸಿನಿಮಾದ ಪ್ರಮೋನ್ ಕೆಲಸ ಅಂತಾ ಓಡಾಡಿಕೊಂಡಿದ್ದ ಶ್ರದ್ಧಾ ಇದೀಗ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಅಂದ್ಹಾಗೆ ಸದ್ಯ ಶ್ರದ್ಧಾ ಕಪೂರ್ ಅವರು ಅಭಿನಯಿಸುತ್ತಿರುವ ಸಿನಿಮಾ ಒಕೆ ಜಾನು. ಈ ಸಿನಿಮಾದಲ್ಲಿ ಆಶಿಕಿ-2 ಸಿನಿಮಾದಲ್ಲಿ ಅಭಿಮಾನಿಗಳಲ್ಲಿ ಮೋಡಿ ಮಾಡಿದ್ದ ಜೋಡಿ ಆದಿತ್ಯಾ ರಾಯ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ಮತ್ತೆ ಜೊತೆಯಾಗುತ್ತಿದೆ.
ಇದೊಂದು ರೋಮ್ಯಾಂಟಿಕ್ ಸಿನಿಮಾವಾಗಿರೋದರಿಂದ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಈ ಹಿಂದೆ ಮೋಡಿ ಮಾಡಿದ್ದ ಜೋಡಿ ಮತ್ತೆ ರೋಮ್ಯಾಂಟಿಕ್ ಸಿನಿಮಾದ ಮೂಲಕವೇ ವಾಪಸ್ಸಾಗುತ್ತಿರೋದರಿಂದ ಸಿನಿಮಾ ಹೇಗಿರುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.
ಒಕೆ ಜಾನು ಸಿನಿಮಾ ತಮಿಳಿನಲ್ಲಿ ಮಣಿರತ್ನಂ ಅವರು ನಿರ್ದೇಶಿಸಿದ ಒಕೆ ಕಣ್ಮಿಣಿ ಸಿನಿಮಾ ರಿಮೇಕ್. ಲೀವಿಂಗ್ ಟುಗೆದರ್ ಕುರಿತಾದ ಈ ಸಿನಿಮಾ ಕಾಲಿವುಡ್ ನಲ್ಲಿ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಇದಗ ಬಾಲಿವುಡ್ ನಲ್ಲಿ ಈ ಸಿನಿಮಾವನ್ನು ಕಣ್ತುಂಬಿಕೊಳ್ಳೋದಕ್ಕೆ ಅನೇಕ ಮಂದಿ ಕಾತುರರಾಗಿದ್ದಾರೆ.