Select Your Language

Notifications

webdunia
webdunia
webdunia
webdunia

ಸಹೋದರರ ಮಕ್ಕಳೊಂದಿಗೆ ಸಲ್ಮಾನ್ ಖಾನ್ ಮಸ್ತಿ

ಸಹೋದರರ ಮಕ್ಕಳೊಂದಿಗೆ ಸಲ್ಮಾನ್ ಖಾನ್ ಮಸ್ತಿ
ಮುಂಬೈ , ಗುರುವಾರ, 5 ಮೇ 2016 (16:01 IST)
ಮೊನ್ನೆಯಷ್ಟೇ ನಟಿ ಮಲ್ಲಿಕಾ ಅರೋರಾ ಅವರು ಪತಿ ಸೋಹೈಲ್ ಅರ್ಬಾಜ್ ಖಾನ್ ಅವರಿಂದ ದೂರವಾಗಿದ್ದಾರೆ.ಅವರಿಬ್ಬರು ವಿಚ್ಛೇದನ ಪಡೋದಕ್ಕೆ ಮುಂದಾಗಿದ್ದಾರೆ ಅನ್ನೋ ವಿಚಾರ ಬಾಲಿವುಡ್‌ದಲ್ಲಿ ಬಾರೀ ಸುದ್ದಿಯಾಗಿ ಹರಿದಾಡಿತ್ತು. 
ಆದ್ರೀಗ ಮಲ್ಲಿಕಾ ಅರೋರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿರುವ ಕೆಲ ಫೋಟೋಗಳು ಅಚ್ಚರಿ ಮೂಡಿಸುತ್ತಿವೆ.
 
ಮೊನ್ನೆ ಮಲ್ಲಿಕಾ ಅರೋರ ಅವರು ತನ್ನ ಮಗ ಅರ್ಹಾನ್ ಹಾಗೂ ಸೋಹೈಲ್ ಖಾನ್ ಪುತ್ರ ನಿರ್ವಾಣ ಅವರೊಂದಿಗೆ ಅವರ ಚಿಕ್ಕಪ್ಪ ನಟ ಸಲ್ಮಾನ್ ಖಾನ್ ಅವರು ಆಟವಾಡುತ್ತಿರವ ಫೋಟೋಗಳನ್ನು ತಮ್ಮ ಇನ್ಸ್ ಟ್ರಾಗ್ರಾಣ್ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ. 
 
ಈ ಫೋಟೋಗಳನ್ನು ನೋಡಿದ್ರೆ ಮಲ್ಲಿಕಾ ಅರೋರ ಅವರು ಮತ್ತೆ ಮುರಿದು ಹೋಗಿರುವಂತಹ ಸಂಬಂಧವನ್ನು ಸರಿಪಡಿಸಲು ಯತ್ನಿಸುತ್ತಿದ್ದಾರಾ ಅನ್ನೋ ಅನುಮಾನ ಮೂಡುತ್ತಿದೆ.ಅಲ್ಲದೇ ಕುಟುಂಬದ ಅತ್ಯಂತ ಖುಷಿಯ ಕ್ಷಣಗಳನ್ನು ಮಲ್ಲಿಕಾ ಅವರು ಶೇರ್ ಮಾಡಿರೋದು ನಿಜಕ್ಕೂ ಉತ್ತಮ ಬೆಳವಣಿಗೆಯ ಸೂಚಕ ಅಂತ ಹೇಳಲಾಗುತ್ತಿದೆ.
 
ಇನ್ನು ಸಲ್ಮಾನ್ ಖಾನ್ ಇದೇ ರೀತಿ ಫ್ರೀಯಾಗಿದ್ದಾಗ ಮನೆ ಮಂದಿಯೊಂದಿಗೆ ತುಂಬಾನೇ ಎಂಜಾಯ್ ಮಾಡ್ತಾರಂತೆ.ಅಲ್ಲದೇ ಮಕ್ಕಳೆಂದರೆ ಸಲ್ಮಾನ್ ಖಾನ್ ಅವರಿಗೆತುಂಬಾ ಇಷ್ಟ. ಹಾಗಾಗಿ ಬಿಡುವು ಸಿಕ್ಕಾಗಲೆಲ್ಲಾ ಅವರು ಈ ರೀತಿ ಮಕ್ಕಳೊಂದಿಗೆ ಜಾಲಿ ಮೂಡ್ ನಲ್ಲಿರುತ್ತಾರಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಫಾರಿನ್ ಬೆಡಗಿಯರೊಂದಿಗೆ ಚಿಕ್ಕಣ್ಣ ಡ್ಯಾನ್ಸ್