Publish Date: Mon, 25 Jun 2018 (12:39 IST)
Updated Date: Mon, 25 Jun 2018 (12:42 IST)
ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಅವರು ಹಾಲಿವುಡ್ ಸಿಂಗರ್ ನಿಕ್ ಜಾನ್ ಜೊತೆ ಡೇಟಿಂಗ್ ನಲ್ಲಿದ್ದಾರೆ ಎನ್ನುವ ರೂಮರ್ಸ್ ಈಗಾಗಲೇ ಸಾಕಷ್ಟು ಬಾರಿ ಕೇಳಿ ಬಂದಿದೆ. ಅಲ್ಲದೇ ಸಭೆ, ಸಮಾರಂಭಗಳಲ್ಲಿಯೂ ಇವರಿಬ್ಬರು ಜೊತೆಯಾಗಿ ಕೈ ಕೈ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ. ಈಗ ಇವರಿಬ್ಬರ ಬಗ್ಗೆ ಮತ್ತೊಂದು ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದೆ.
ಹೌದು. ಅದೇನೆಂದರೆ ಪ್ರಿಯಾಂಕಾ ಮುಂಬೈನಲ್ಲಿ ಹೊಸ ಮನೆಯೊಂದನ್ನು ಖರೀದಿಸಿದ್ದಾರಂತೆ. ಐಷಾರಾಮಿ ಏರಿಯಾದಲ್ಲಿರುವ ಇದರ ಬೆಲೆ ಬರೋಬ್ಬರಿ 100 ಕೋಟಿ ರೂ. ಅಂತೆ. ಇದು ಸಮುದ್ರದ ತಟಕ್ಕೆ ಹತ್ತಿರವಾಗಿದ್ದು, ತಮ್ಮ ಹೊಸ ಮನೆಯ ಪ್ರವೇಶಕ್ಕೆ ಪ್ರಿಯಾಂಕಾ ಅವರು ನಿಕ್‌ನನ್ನು ಕೂಡ ಜತೆಯಾಗಿ ಕರೆತಂದಿದ್ದಾರಂತೆ. ಮೂಲಕಗಳ ಪ್ರಕಾರ ಕೆಲ ದಿನಗಳವರೆಗೆ ಪ್ರಿಯಾಂಕಾ ಹಾಗೂ ನಿಕ್ ಈ ಮನೆಯಲ್ಲಿರಲಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ