Webdunia - Bharat's app for daily news and videos

Install App

Shocking news: ಕ್ಯಾನ್ಸರ್ ನಿಂದ ಖ್ಯಾತ ನಟಿ ಪೂನಂ ಪಾಂಡೆ ನಿಧನ

Krishnaveni K
ಶುಕ್ರವಾರ, 2 ಫೆಬ್ರವರಿ 2024 (12:20 IST)
Photo Courtesy: Twitter
ಮುಂಬೈ: ಗರ್ಭಕಂಠದ ಕ್ಯಾನ್ಸರ್ ನಿಂದಾಗಿ ನಟಿ, ಮಾಡೆಲ್ ಪೂನಂ ಪಾಂಡೆ ನಿಧನರಾಗಿದ್ದಾರೆ ಎಂಬ ವರದಿಯಾಗಿದ್ದು, ಫ್ಯಾನ್ಸ್ ಗೆ ಶಾಕ್ ಆಗಿದೆ.

ಹೀಗೊಂದು ಸುದ್ದಿ ಇನ್ ಸ್ಟಾಗ್ರಾಂನಲ್ಲಿ ಶೇರ್ ಆಗಿದ್ದು, ಅಭಿಮಾನಿಗಳು ಇದು ನಿಜವೋ, ಸುಳ್ಳೋ ಎಂದು ನಂಬದ ಸ್ಥಿತಿಯಲ್ಲಿದ್ದಾರೆ. ಇನ್ನೂ ಕೇವಲ 32 ವರ್ಷದ ನಟಿಯ ಸಾವಿನ ಸುದ್ದಿ ನಿಜಕ್ಕೂ ಎಲ್ಲರಿಗೂ ಶಾಕಿಂಗ್ ಆಗಿದೆ. ಪೂನಂ ಪಾಂಡೆ ಇನ್ ಸ್ಟಾಗ್ರಾಂ ಖಾತೆಯಲ್ಲಿ ಆಕೆಯ ಮ್ಯಾನೇಜಿಂಗ್ ಟೀಂ ಇಂತಹದ್ದೊಂದು ಸುದ್ದಿ ಪ್ರಕಟಿಸಿದೆ.

ಸಂದೇಶದಲ್ಲಿ ಏನಿದೆ?
ಇಂದು ಬೆಳಿಗ್ಗೆ ದುಃಖಕರ ಸಂದೇಶವೊಂದು ಹೇಳಬೇಕಾದ ಪರಿಸ್ಥಿತಿ ನಮಗೆ ಬಂದಿದೆ.  ನಮ್ಮ ಪ್ರೀತಿಯ ಪೂನಂ ಗರ್ಭಕಂಠದ ಕ್ಯಾನ್ಸರ್ ನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಲು ದುಃಖವಾಗುತ್ತಿದೆ. ಆಕೆಯ ಜೊತೆಗೆ ಸಂಪರ್ಕದಲ್ಲಿದ್ದ ಎಲ್ಲರೂ ಪ್ರೀತಿಯನ್ನಷ್ಟೇ ತೋರಿದ್ದಾರೆ. ಈ ಸಂದರ್ಭದಲ್ಲಿ ಆಕೆಯ ಖಾಸಗಿತನವನ್ನು ಗೌರವಿಸುತ್ತೀರಿ  ಎಂದು ಭಾವಿಸಿದ್ದೇವೆ’ ಎಂದು ಸಂದೇಶ ಬರೆಯಲಾಗಿದೆ.

ಮಾಲ್ಡೀವ್ಸ್ ವಿರೋಧಿ ಅಭಿಯಾನಕ್ಕೆ ಕೈ ಜೋಡಿಸಿದ್ದ ನಟಿ
ಇತ್ತೀಚೆಗಷ್ಟೇ ಮಾಲ್ಡೀವ್ಸ್ ವಿರೋಧಿ ಅಭಿಯಾನಕ್ಕೆ ಕೈಜೋಡಿಸಿ ನಟಿ ಪೂನಂ ತಮ್ಮ ಶೂಟಿಂಗ್ ನ್ನೇ ರದ್ದು ಮಾಡಿ ಸುದ್ದಿಯಾಗಿದ್ದರು. ಅವರ ಅನಾರೋಗ್ಯದ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಇದೀಗ ಸಡನ್ ಸಾವು ಎಲ್ಲರಿಗೂ ಶಾಕ್ ನೀಡಿದೆ.

ಪೂನಂ ಪಾಂಡೆ ಬಾಲಿವುಡ್ ಮಾತ್ರವಲ್ಲದೆ ಕನ್ನಡ, ತೆಲುಗು ಸಿನಿಮಾಗಳಲ್ಲೂ ಅಭಿನಯಿಸಿದ್ದರು. ಅವರ ನಿಧನಕ್ಕೆ ಅಭಿಮಾನಿಗಳು, ಸಿನಿ ಸ್ನೇಹಿತರು ಶಾಕ್ ಜೊತೆಗೆ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

46ವರ್ಷಗಳ ಬಳಿಕ ಸ್ಕ್ರಿನ್ ಹಂಚಿಕೊಳ್ಳಲಿದ್ದಾರೆ ದಕ್ಷಿಣ ಭಾರತದ ಸ್ಟಾರ್ ನಟರು

ದರ್ಶನ್ ಭೇಟಿಯಾದ ಬೆನ್ನಲ್ಲೇ ಡೆವಿಲ್‌ ಸಿನಿಮಾದ ಬಿಗ್‌ಅಪ್ಡೇಟ್‌ ಕೊಟ್ಟ ವಿಜಯಲಕ್ಷ್ಮಿ

ವ್ಯಕ್ತಿಯೊಬ್ಬರಿಗೆ ರಶ್ಮಿಕಾ ಶೇಕ್‌ಹ್ಯಾಂಡ್ ಕೊಟ್ರೆ ವಿಜಯ್ ದೇವರಕೊಂಡ ಹೀಗೇ ನಡೆದುಕೊಳ್ಳುವುದಾ, Viral Video

ವಿಷ್ಣು ಸ್ಮಾರಕಕ್ಕೆ ಕಿಚ್ಚ ಜಾಗ ಕೊಟ್ರೇ, ಅಭಿಮಾನಿಗಳ ಸಂಘಟನೆ ಹೈಕೋರ್ಟ್ ಗೆ ಹೋಗೋದಾ

ರಮ್ಯಾಗೆ ಅಶ್ಲೀಲ ಮೆಸೇಜ್‌, ಜೀವಬೆದರಿಕೆ ಪ್ರಕರಣ: ತನಿಖೆಯಲ್ಲಿ ಭಾರೀ ಬೆಳವಣಿಗೆ

ಮುಂದಿನ ಸುದ್ದಿ
Show comments