Select Your Language

Notifications

webdunia
webdunia
webdunia
webdunia

ಪತಿ ರಾಜ್ ಕುಂದ್ರಾರಿಂದ ಬೇರಾಗಲು ತೀರ್ಮಾನಿಸಿದರೇ ಶಿಲ್ಪಾ ಶೆಟ್ಟಿ?!

ಪತಿ ರಾಜ್ ಕುಂದ್ರಾರಿಂದ ಬೇರಾಗಲು ತೀರ್ಮಾನಿಸಿದರೇ ಶಿಲ್ಪಾ ಶೆಟ್ಟಿ?!
ಮುಂಬೈ , ಮಂಗಳವಾರ, 31 ಆಗಸ್ಟ್ 2021 (09:05 IST)
ಮುಂಬೈ: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪತಿ ರಾಜ್ ಕುಂದ್ರಾ ಬಂಧನವಾದ ಮೇಲೆ ನಟಿ ಶಿಲ್ಪಾ ಶೆಟ್ಟಿ ಕೂಡಾ ಸಾಕಷ್ಟು ಅವಮಾನ ಅನುಭವಿಸಿದ್ದರು.


ಈ ವಿಚಾರವಾಗಿ ಪತಿಯ ಮೇಲೆ ಅಸಮಾಧಾನಗೊಂಡ ಶಿಲ್ಪಾ ಪೊಲೀಸರು ವಿಚಾರಣೆಗೆಂದು ರಾಜ್ ಕುಂದ್ರಾರನ್ನು ಮನೆಗೆ ಕರೆದುಕೊಂಡು ಬಂದಾಗ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ.

ಇದೀಗ ಇದೇ ವಿಚಾರವಾಗಿ ಬೇಸರಗೊಂಡಿರುವ ಶಿಲ್ಪಾ ಇದರಿಂದ ತಮ್ಮ ಮಕ್ಕಳ ಮೇಲೂ ದುಷ್ಪರಿಣಾಮ ಬೀರುವುದು ಬೇಡವೆಂಬ ಕಾರಣಕ್ಕೆ ಪತಿಯಿಂದ ಪ್ರತ್ಯೇಕವಾಗಲು ನಿರ್ಧರಿಸಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಶಿಲ್ಪಾ ತಮ್ಮ ಪತಿಯ ಮೇಲಿನ ಆರೋಪಗಳು ತಮ್ಮ ಮಕ್ಕಳ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅವರು ಪ್ರತ್ಯೇಕವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾರ್ಲಿಯ ಟಾರ್ಚರ್ ಹಾಡು ಲಾಂಚ್ ಮಾಡಲು ಮುಂದಾದ ರಕ್ಷಿತ್ ಶೆಟ್ಟಿ ಆಂಡ್ ಟೀಂ’