Webdunia - Bharat's app for daily news and videos

Install App

ಗಂಡ ಏನ್ಮಾಡ್ತಾನೆ ಎಂದು ನೋಡುವ ಪುರುಸೊತ್ತು ನನಗಿರಲಿಲ್ಲ: ಶಿಲ್ಪಾ ಶೆಟ್ಟಿ

Webdunia
ಗುರುವಾರ, 16 ಸೆಪ್ಟಂಬರ್ 2021 (16:44 IST)
ಮುಂಬೈ: ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಬಂಧಿತರಾಗಿರುವ ಉದ್ಯಮಿ ರಾಜ್ ಕುಂದ್ರಾ ಬಗ್ಗೆ ಪತ್ನಿ, ನಟಿ ಶಿಲ್ಪಾ ಶೆಟ್ಟಿ ಪೊಲೀಸರಿಗೆ ನೀಡಿರುವ ಹೇಳಿಕೆ ಬಹಿರಂಗವಾಗಿದೆ.


ಇದೇ ಮೊದಲ ಬಾರಿಗೆ ರಾಜ್ ಕುಂದ್ರಾ ಬಂಧನದ ಕುರಿತು ಬಿಚ್ಚು ಮನಸ್ಸಿನಿಂದ ಮಾತನಾಡಿರುವ ಶಿಲ್ಪಾ, ನಾನು ನನ್ನ ಕೆಲಸಗಳಲ್ಲಿ ಬ್ಯುಸಿಯಾಗಿದ್ದೆ. ರಾಜ್ ಕುಂದ್ರಾ ಏನು ಮಾಡುತ್ತಿದ್ದರು ಎಂದು ನೋಡಲೂ ನನಗೆ ಪುರುಸೊತ್ತಿರಲಿಲ್ಲ ಎಂದಿದ್ದಾರೆ.

ಕ್ರೈಂ ಬ್ರ್ಯಾಂಚ್ ವಿಚಾರಣೆ ವೇಳೆ ಶಿಲ್ಪಾ ನೀಡಿದ ಹೇಳಿಕೆ ಬಹಿರಂಗವಾಗಿದೆ. ಅದರಲ್ಲಿ ಶಿಲ್ಪಾ ಅಧಿಕಾರಿಗಳ ಮುಂದೆ, ‘ವಿಯಾನ್ ಇಂಡಸ್ಟ್ರೀಸ್ ಮುಖಾಂತರ ಹಾಟ್ ಶಾಟ್ ಆಪ್ ಕ್ರಿಯೇಟ್ ಆಗಿದ್ದು, ಅದರಲ್ಲಿ ಪೋರ್ನ್ ವಿಡಿಯೋಗಳನ್ನು ನಿರ್ಮಿಸಲಾಗುತ್ತಿದೆ ಎಂದು ಗೊತ್ತಾಗಿದ್ದೇ ನನಗೆ ಈಗ. ನಾನು ನನ್ನದೇ ಕೆಲಸಗಳಲ್ಲಿ ಬ್ಯುಸಿಯಿದ್ದೆ. ನನ್ನ ಗಂಡ ಏನು ಮಾಡುತ್ತಿದ್ದ ಎಂಬುದು ನನಗೆ ಗೊತ್ತಿರಲಿಲ್ಲ. ಆತ ನನಗೆ ಹೇಳುತ್ತಲೂ ಇರಲಿಲ್ಲ. ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ’ ಎಂದಿದ್ದಾರೆ. ಅಲ್ಲದೆ ನನಗೆ ಬಾಲೀಫೇಮ್ ಎಂಬ ಆಪ್ ಬಗ್ಗೆಯೂ ಗೊತ್ತಿಲ್ಲ ಎಂದಿದ್ದಾರೆ. ಇದಕ್ಕೂ ಮೊದಲು ಫೆಬ್ರವರಿಯಲ್ಲಿ ವಿಯಾನ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದ ಉಮೇಶ್ ಕಾಮತ್ ನನ್ನು ಪೋರ್ನ್ ವಿಡಿಯೋಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದಾಗ ಗಂಡನ ಬಳಿಕ ಆ ಬಗ್ಗೆ ಕೇಳಿದ್ದೆ. ಆದರೆ ರಾಜ್ ಕುಂದ್ರಾ ಆಗ ಉಮೇಶ್ ಪ್ರತ್ಯೇಕವಾಗಿ ಪೋರ್ನ್ ವಿಡಿಯೋಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಎಂದಿದ್ದರು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kamal Hassan ಕನ್ನಡ ವಿವಾದ: ತಮಿಳುನಾಡು ಜನತೆಗೆ ಸ್ಪೆಷಲ್ ಥ್ಯಾಂಕ್ಸ್ ಎಂದ ನಟ

Video Viral: RCB ವಿನ್‌ ಆಗುತ್ತಿದ್ದ ಹಾಗೇ ಮಗನ ವರ್ತನೆಯನ್ನು ವಿಡಿಯೋ ಮಾಡಿ ಹಂಚಿಕೊಂಡ ನಟ ಅಲ್ಲು ಅರ್ಜುನ್‌

Kamal Haasan: ಕಮಲ್ ಹಾಸನ್ ಗೆ ಕನ್ನಡ ಪುಸ್ತಕ ಕೊಟ್ಟಿದ್ದು ಯಾಕೆ: ರಂಜನಿ ರಾಘವನ್ ಸ್ಪಷ್ಟನೆ

Vaishnavi Gowda: ಮದುವೆ ಸಂಗೀತ್ ಕಾರ್ಯಕ್ರಮವನ್ನೂ ಮರೆತು ಆರ್ ಸಿಬಿ ಮ್ಯಾಚ್ ನೋಡಿದ ವೈಷ್ಣವಿ ಗೌಡ

Kamal Haasan: ಕಮಲ್ ಹಾಸನ್ ಗರ್ವಭಂಗ: ಥಗ್ ಲೈಫ್ ಸಿನಿಮಾಗೆ ಬಿಗ್ ಶಾಕ್

ಮುಂದಿನ ಸುದ್ದಿ
Show comments