Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಗೇಮ್ ವಿರುದ್ದ ನ್ಯಾಯಾಲಯಕ್ಕೆ ಮೊರೆ; ಕಾನೂನು ಹೋರಾಟದಲ್ಲಿ ಸಲ್ಮಾನ್ ಖಾನ್ಗೆ ಮುನ್ನಡೆ

webdunia
ಬುಧವಾರ, 8 ಸೆಪ್ಟಂಬರ್ 2021 (14:25 IST)
ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಸೆಲ್ಮೋನ್ ಭೋಯ್ ಎಂಬ ಹೆಸರಿನ ಗೇಮ್ ವಿರುದ್ಧ ಬಾಲಿವುಡ್ ನಟ ಸಲ್ಮಾನ್ ಖಾನ್ ಕಾನೂನು ಹೋರಾಟಕ್ಕೆ ಇಳಿದಿದ್ದರು.

ಈ ಗೇಮ್ 2002ರಲ್ಲಿ ನಡೆದಿದ್ದ ಸಲ್ಮಾನ್ ಖಾನ್ರ ಹಿಟ್ & ರನ್ ಕೇಸ್ ಆಧರಿಸಿ ನಿರ್ಮಿಸಲಾಗಿದೆ. ದೇಶಮಟ್ಟದಲ್ಲಿ ಭಾರೀ ಸದ್ದು ಮಾಡಿದ್ದ ಈ ಪ್ರಕರಣದಿಂದ 2015ರಲ್ಲಿ ಸಲ್ಮಾನ್ ಖಾನ್ ಆರೋಪ ಮುಕ್ತರಾಗಿದ್ದರು. ಇದೀಗ ಸಲ್ಮಾನ್ ಖಾನ್ ಮೊಕದ್ದಮೆ ಆಧರಿಸಿ ಈ ಗೇಮ್ಗೆ ಮುಂಬೈ ಸಿವಿಲ್ ಕೋರ್ಟ್ ತಾತ್ಕಾಲಿಕ ನಿರ್ಬಂಧ ಹೇರಿದೆ.
ವರದಿಗಳ ಪ್ರಕಾರ, ಸೆಲ್ಮೋನ್ ಭೋಯ್ ಗೇಮ್ ನಿರ್ಮಾತೃ ಕಂಪನಿಯಾದ ಪರೋಡಿ ಸ್ಟುಡಿಯೋಸ್ ಪ್ರೈವೇಟ್ ಲಿಮಿಟೆಡ್ ಗೆ, ಸಲ್ಮಾನ್ ಖಾನ್ಗೆ ಸಂಬಂಧಿಸಿದ ಗೇಮ್ ರಚನೆ, ಅಭಿವೃದ್ಧಿ ಅಥವಾ ಮರುಸೃಷ್ಠಿ ಮಾಡದಂತೆ ಆದೇಶ ನೀಡಿದೆ. ಗೂಗಲ್ ಪ್ಲೇ ಸೇರಿದಂತೆ ಇತರೆ ಯಾವುದೇ ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಈ ಗೇಮ್ ಇಡದಂತೆ ಕೋರ್ಟ್ ಸೂಚನೆ ನೀಡಿದೆ ಎನ್ನಲಾಗಿದೆ.
ಸೆಲ್ಮೋನ್ ಭೋಯ್ ವಿರುದ್ಧ ಆಗಸ್ಟ್ ತಿಂಗಳಲ್ಲಿ ಕಾನೂನು ಹೋರಾಟಕ್ಕೆ ಸಲ್ಮಾನ್ ಖಾನ್ ಮುಂದಾಗಿದ್ದರು. ಈ ಗೇಮ್ ತಮ್ಮ ಚಾರಿತ್ರ್ಯ ವಧೆ ಮಾಡುತ್ತಿದೆ. ಈ ಗೇಮ್ನಲ್ಲಿರುವ ಫೋಟೋಗಳು ಹಾಗೂ ಗೇಮ್ನ ರೀತಿ ತಮಗೆ ಸಂಬಂಧಿಸಿದೆ ಎಂದು ಆರೋಪ ಮಾಡಿದ್ದರು.
ಸಲ್ಮಾನ್ ಖಾನ್ ದೂರಿನ ಬಳಿಕ ಗೇಮ್ ಹಾಗೂ ಅದರಲ್ಲಿ ಬರುವ ಫೋಟೋ ಹಾಗೂ ಸನ್ನಿವೇಶಗಳನ್ನು ವೀಕ್ಷಿಸಿದ ಕೋರ್ಟ್ ದೂರುದಾರ ಸಲ್ಮಾನ್ ಖಾನ್ಗೂ ಈ ಗೇಮ್ಗೂ ಸಂಬಂಧ ಇರುವಂತೆ ಕಾಣುತ್ತಿದೆ ಎಂದು ಹೇಳಿದೆ.
ಗೇಮ್ ನಿರ್ಮಾಣ ಸಂಸ್ಥೆಗೆ ಸೂಚನೆ ನೀಡಿದ ಸಿವಿಲ್ ಕೋರ್ಟ್, ಸಲ್ಮಾನ್ ಖಾನ್ ಒಪ್ಪಿಗೆ ಪಡೆಯದೇ ಈ ರೀತಿಯ ಗೇಮ್ ನಿರ್ಮಾಣ ಮಾಡಲು ಸಾಧ್ಯವಿಲ್ಲ. ದೂರುದಾರ ವ್ಯಕ್ತಿಯ ಅನುಮತಿ ಇಲ್ಲದೇ ಅವರ ಫೋಟೋವನ್ನು ಹೋಲುವಂತಹ ಗೇಮ್ನ್ನು ಅಭಿವೃದ್ಧಿ ಮಾಡಬಾರದು. ಇದು ಅವರ ಖಾಸಗಿತನದ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಹೇಳಿದೆ.


ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಡ್ರಗ್ ಕೇಸ್ನಲ್ಲಿ ಅನುಶ್ರೀಗೆ ಬಿಗ್ ರಿಲೀಫ್! ಚಾರ್ಜ್ಶೀಟ್ನಲ್ಲಿ ಹೆಸರು ಕೈಬಿಟ್ಟಿದ್ದೇಕೆ?