ಮುಂಬೈ: ಬಿಗ್ ಬಾಸ್ ಹಿಂದಿ ವಿನ್ನರ್, ನಟ ಸಿದ್ಧಾರ್ಥ್ ಶುಕ್ಲ ಸಾವು ಅನೇಕ ಯುವ ನಟರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.
									
										
								
																	
ಅವಕಾಶ ಸಿಗಲು ಉತ್ತಮ ದೇಹದಾರ್ಡ್ಯತೆ ಬೆಳೆಸಲು ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ಅಸಮತೋಲನದ, ಅನಿಯಂತ್ರಿತ ವರ್ಕೌಟ್ ಯುವ ನಟರ ಜೀವಕ್ಕೇ ಕುತ್ತು ತರುತ್ತಿದೆ.
									
			
			 
 			
 
 			
			                     
							
							
			        							
								
																	ಹಿಂದೆಯೂ ಇಂತಹ ಅನೇಕ ಘಟನೆಗಳು ನಡೆದಿದ್ದೆ. ಆದರೂ ಪೈಪೋಟಿಯ ಈ ಯುಗದಲ್ಲಿ ಯುವ ನಟರು ಅವಕಾಶ ಗಿಟ್ಟಿಸಿಕೊಳ್ಳಲು ಇಂತಹ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ. ವ್ಯಾಯಾಮ ಹೇಗೆ ದೇಹಕ್ಕೆ ಒಳ್ಳೆಯದೋ, ಅದು ಅತಿಯಾದರೂ ಕೆಟ್ಟದ್ದೇ. ಸಿದ್ಧಾರ್ಥ್ ಸಾವಿಗೂ ಅತಿಯಾದ ವರ್ಕೌಟ್ ಕಾರಣವಾಗಿರಬಹುದು ಎಂಬ ಊಹಾಪೋಹಗಳಿವೆ. ಇದನ್ನು ಯುವ ನಟರು ಒಂದು ಪಾಠವಾಗಿ ತೆಗೆದುಕೊಳ್ಳಬೇಕಿದೆ.