Select Your Language

Notifications

webdunia
webdunia
webdunia
webdunia

ಶಿಲ್ಪಾ, ರಾಜ್ ಕುಂದ್ರಾಗೆ ಮತ್ತೊಂದು ಆಘಾತ- ಮೋಸ ಮಾಡಿ ಪೋರ್ನ್ ವಿಡಿಯೋ: ಕೋರ್ಟ್ನಲ್ಲಿ ಕೇಸ್

ಶಿಲ್ಪಾ, ರಾಜ್ ಕುಂದ್ರಾಗೆ ಮತ್ತೊಂದು ಆಘಾತ- ಮೋಸ ಮಾಡಿ ಪೋರ್ನ್ ವಿಡಿಯೋ: ಕೋರ್ಟ್ನಲ್ಲಿ ಕೇಸ್
ನವದೆಹಲಿ , ಗುರುವಾರ, 2 ಸೆಪ್ಟಂಬರ್ 2021 (15:01 IST)
ನವದೆಹಲಿ : ಬ್ಲೂಫಿಲ್ಮ್ಂ ಕೇಸ್ನಲ್ಲಿ ಸಿಲುಕಿ ಬಂಧನದಲ್ಲಿ ಇರುವ ಉದ್ಯಮಿ ರಾಜ್ಕುಂದ್ರಾ ಹಾಗೂ ಅವರ ಪತ್ನಿ ನಟಿ ಶಿಲ್ಪಾ ಶೆಟ್ಟಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಅದೇನೆಂದರೆ ಇವರ ವಿರುದ್ಧ ದೆಹಲಿ ಉದ್ಯಮಿ ವಿಶಾಲ್ ಗೋಯಲ್ ಎನ್ನುವವರು ದೂರು ದಾಖಲು ಮಾಡಿದ್ದಾರೆ.

ಸೌಂದರ್ಯ ವರ್ಧಕ, ಆಯನಿಮೇಷನ್ ಹಾಗೂ ಗೇಮಿಂಗ್ ಅಪ್ಲಿಕೇಶನ್ ವ್ಯವಹಾರ ನಡೆಸುವುದಾಗಿ ಹೇಳಿಕೊಂಡು ತಮ್ಮಿಂದ ಲಕ್ಷಗಟ್ಟಲೇ ಹಣ ಹೂಡಿಕೆ ಮಾಡಿಕೊಂಡು ಬ್ಲೂಫಿಲ್ಮ್ಂ ತಯಾರಿಸಿರುವ ಉದ್ಯಮಿ ರಾಜ್ಕುಂದ್ರಾ ಹಾಗೂ ನಟಿ ಶಿಲ್ಪಾ ಶೆಟ್ಟಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ವಿಶಾಲ್ ಕೋರ್ಟ್ ಮೊರೆ ಹೋಗಿದ್ದಾರೆ. ದಂಪತಿ ವಿರುದ್ಧ ವಂಚನೆ ಆರೋಪವನ್ನು ಅವರು ಹಾಕಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ದೆಹಲಿ ಕೋರ್ಟ್, ಈ ದೂರಿಗೆ ಸಂಬಂಧಿಸಿದಂತೆ ದಂಪತಿ ವಿರುದ್ಧ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರಿಗೆ ನಿರ್ದೇಶಿಸಿದೆ. 2018ರಲ್ಲಿ ಮುಂಬೈ ಮೂಲದ ಕಂಪನಿಯೊಂದರಲ್ಲಿ ಲಕ್ಷಗಟ್ಟಲೇ ಹಣ ಹೂಡಿಕೆ ಮಾಡುವಂತೆ ಹೇಳಿ ಪ್ರೇರೆಪಿಸಿ ವಂಚನೆ ಮಾಡಲಾಗಿದೆ ಎನ್ನುವುದು ವಿಶಾಲ್ ಅವರ ಆರೋಪ. ಮಾತ್ರವಲ್ಲದೇ ಅವರು ತಮಗೆ ಹಣವನ್ನೂ ವಾಪಸ್ ಮಾಡಿಲ್ಲ, ಜತೆಗೆ ತಮಗೆ ಯಾವುದೆ ಲಾಭದ ಮೊತ್ತ ನೀಡಿಲ್ಲ, ಇದರಿಂದ ಷೇರು ಮೌಲ್ಯ ಕುಸಿದು ತಾವು ನಷ್ಟ ಅನುಭವಿಸಬೇಕಾಗಿ ಬಂದಿದೆ ಎಂದಿದ್ದಾರೆ.
ತಮ್ಮಿಂದ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಇಬ್ಬರ ಉದ್ದೇಶಪೂರ್ವಕವಾಗಿ 41.33 ಲಕ್ಷ ರೂಪಾಯಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ. ಈ ಹಣವನ್ನು ದಂಪತಿ ವೈಯಕ್ತಿಕ ಲಾಭಕ್ಕೆ ಬಳಸಿಕೊಂಡಿದ್ದಾರೆ, ಪೋರ್ನ್ ವಿಡಿಯೋ ಮಾಡಿ ಸಿಕ್ಕಿಕೊಂಡಿರುವುದು ತಮಗೆ ಈಗ ಗೊತ್ತಾಗಿದೆ. ಇದರಿಂದ ನಾನು ಮೋಸ ಹೋಗಿರುವುದು ತಿಳಿದಿದ್ದು, ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗಣೇಶ ಹಬ್ಬಕ್ಕೆ ಪ್ರೇಕ್ಷಕರ ಮುಂದೆ ಶಿವಣ್ಣ ಬದಲು ಲೂಸ್ ಮಾದ ಯೋಗಿ!