Webdunia - Bharat's app for daily news and videos

Install App

ರಾಹುಲ್‌ಗಿಂತ ಆಕೆಯೇ ಕರುಣಾಮಯಿ: ಪ್ರಿಯಾಂಕಾರನ್ನು ಅಟ್ಟಕ್ಕೇರಿಸಿ ನಟಿ ಕಂಗನಾ ಹೇಳಿದ್ದೇನು

Sampriya
ಗುರುವಾರ, 9 ಜನವರಿ 2025 (17:54 IST)
Photo Courtesy X
ಮುಂಬೈ: ನಟಿ-ನಿರ್ದೇಶಕಿ ಮತ್ತು ಬಿಜೆಪಿ ಸಂಸದೆ ಕಂಗನಾ ರನೌತ್ ಪ್ರಸ್ತುತ ತಮ್ಮ ಮುಂಬರುವ ಚಿತ್ರ ಎಮರ್ಜೆನ್ಸಿ ಪ್ರಚಾರದಲ್ಲಿ ನಿರತರಾಗಿದ್ದಾರೆ.

 ಸೆನ್ಸಾರ್ ಪ್ರಮಾಣಪತ್ರ ಮತ್ತು ಸಿಖ್ ಸಮುದಾಯವನ್ನು ತಪ್ಪಾಗಿ ಪ್ರತಿನಿಧಿಸುವ ಆರೋಪಗಳಿಗೆ ಸಂಬಂಧಿಸಿದಂತೆ ತಿಂಗಳುಗಟ್ಟಲೆ ವಿವಾದಗಳ ಮೂಲಕ ಹೋರಾಡಿದ ನಂತರ ಇದೀಗ ಕೊನೆಗೂ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಎಮರ್ಜೆನ್ಸಿ ಸಿನಿಮಾ ಇದೇ 17ರಂದು ತೆರೆಗೆ ಬರಲಿದೆ.

ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ ನಟಿ ಕಂಗನಾ ಅವರು, ಇಂದಿರಾ ಗಾಂಧಿ ಮೊಮ್ಮಗಳು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಸಂಸತ್ತಿನಲ್ಲಿ ಭೇಟಿಯಾದ ಬಗ್ಗೆ ತೆರೆದಿಟ್ಟರು.
‌‌
ನಾನು ಸಂಸತ್‌ನಲ್ಲಿ ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾಗಿದ್ದೆ. ಅವರ ಸಹೋದರ ರಾಹುಲ್‌ ಗಾಂಧಿಗಿಂತ ಅವಳು ತುಂಬಾ ಕರುಣಾಮಯಿ ಎಂದು ನಾನು ಹೇಳುತ್ತೇನೆ.

ನಾವು ಸಂಸತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯಾರೋ ಮೃದುವಾದ ಧ್ವನಿಯಲ್ಲಿ, 'ಓ ಮೈ ಗಾಡ್, ಆ ಸುಂದರವಾದ ಕೂದಲನ್ನು ನೋಡಿ ಮತ್ತು ಅವಳ ಉಡುಗೆ ಎಷ್ಟು ಸುಂದರವಾಗಿದೆ' ಎಂದು ಹೇಳುತ್ತಿರುವುದ್ನು ಕೇಳಿದೆ. ಹಿಂತಿರುಗಿದಾಗ ಶ್ರೀಮತಿ ಪ್ರಿಯಾಂಕಾ ಗಾಂಧಿಯನ್ನು ನೋಡಿದೆ. ಅವಳು ತುಂಬಾ ಆಕರ್ಷಕವಾಗಿದ್ದಳು, ಸ್ವಾಗತಿಸುವವಳಾಗಿದ್ದಳು ಮತ್ತು ಅವಳ ಮುಖದಲ್ಲಿ ನಗು ಇದ್ದ ಕಾರಣ ನನಗೆ ಆಶ್ಚರ್ಯವಾಯಿತು ಎಂದರು.

ನನ್ನನ್ನು ಅಭಿನಂದಿಸಿದರು. ಹಾಗಾಗಿ ಚಿತ್ರವನ್ನು ವೀಕ್ಷಿಸುವಂತೆ ಪ್ರಿಯಾಂಕಾಗೆ ಆಹ್ವಾನ ನೀಡಿದೆ. ಅವರು ಓಕೆ ಹೇಳಿದರು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments