Select Your Language

Notifications

webdunia
webdunia
webdunia
webdunia

ಶಾಹಿದ್ ಕಪೂರ್ ಬೆಂಬಿಡದ ಮಹಿಳೆ

venugopala.k

ಶಾಹಿದ್ ಕಪೂರ್ ಬೆಂಬಿಡದ ಮಹಿಳೆ

venugopala.k

ಮುಂಬೈ , ಬುಧವಾರ, 1 ಫೆಬ್ರವರಿ 2017 (15:58 IST)

ಕರೀನಾ ಜೊತೆಗಿನ ಲವ್ ಬ್ರೇಕದ ಹೊ ನೋವಿನಿಂದ ಹೊರಬಂದು ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದ ಬಾಲಿವುಡ್ ನಟ ಶಾಹಿದ್ ಕಪೂರ್`ಗೆ ಮತ್ತೊಂದು ಸಂಕಷ್ಟ ಶುರುವಾಗಿದೆ.
 


ಮಹಿಳೆಯೊಬ್ಬರು ಶಾಹಿದ್ ಹಿಂದೆಬಿದ್ದಿದ್ದು ಎಲ್ಲಿ ಹೋದರಲ್ಲಿ ಹಿಂಬಾಲಿಸುತ್ತಿದ್ದಾರಂತೆ. ಇದರಿಂದ ನೊಂದಿರುವ ಶಾಹಿದ್ ಖಿನ್ನತೆಗೆ ಒಳಗಾಗಿದ್ದಾರೆ. ಕೆಲ ದಿನಗಳ ಹಿಂದೆ ಸಹೋದರನ ಸಿನಿಮಾ ಸೆಟ್`ಗೆ ತೆರಳಿದ್ದ ಸಂದರ್ಭವೂ ಈಕೆ ಹಿಂಬಾಲಿಸಿದ್ದಳಂತೆ.

 

ಶಾಹಿದ್ ಈ ಸಮಸ್ಯೆ ಎದುರಿಸುತ್ತಿರುವುದು ಇದೇ ಮೊದಲೇನಲ್ಲ. ಕೆಲ ವರ್ಷಗಳ ಹಿಂದೆ ತಮ್ಮನ್ನ ಇದೇ ರೀತಿ ಹಿಂಬಾಲಿಸಿದ್ದ ವಾಸ್ತವಿಕ ಪಂಡಿತ್ ಎಂಬ ಯುವತಿ ವಿರುದ್ಧ ದೂರು ನೀಡಿದ್ದರು. ಆ ಬಳಿಕ ವಾಸ್ತವಿಕ ನಾಪತ್ತೆಯಾಗಿದ್ದರು.

 

ಸದ್ಯ, ವಿಶಾಲ್ ಭಾರದ್ವಾಜ್ ನಿರ್ದೇಶನದ ರಂಗೂನ್ ಸಿನಿಮಾ ಶೂಟಿಂಗ್`ನಲ್ಲಿ ಶಾಹಿದ್ ಬ್ಯುಸಿಯಾಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಜಯ್ ರಾವ್ ಹೊಸ ಚಿತ್ರ ದಂಡಯಾತ್ರೆ ಶುರು